ಸಿನಿಮಾ ಥಿಯೇಟರ್, ಪಿವಿಆರ್ ಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ
ಬೆಂಗಳೂರು : ಕೊರೊನಾ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿರುವ ಕ್ಷೇತ್ರಗಳ ಪೈಕಿ ಸಿನಿಮಾ ಕ್ಷೇತ್ರ ಪ್ರಮುಖವಾದದ್ದು. ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಸಿನಿಮೋಧ್ಯಮ ಇನ್ನೂ ಚೇತರಿಕೆ ಕಂಡಿಲ್ಲ.
ಥಿಯೇಟರ್ ಗಳು ಓಪನ್ ಆದ್ರೂ, ಶೇ 50 ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಚಿತ್ರಮಂದಿರದ ಕಡೆ ಪ್ರೇಕ್ಷಕರು ಸುಲಿಯುತ್ತಿಲ್ಲ. ಇನ್ನೂ ಹಲವು ಕಡೆ ಥಿಯೇಟರ್ ಗಳೇ ಆರಂಭವಾಗಿಲ್ಲ.
ಏತನ್ಮಧ್ಯೆ ಸಿಎಂ ಬಿಎಸ್ ಯಡಿಯೂರಪ್ಪ ಸಾರಿಗೆ ಸೇವೆಯಲ್ಲಿ ಶೇ.100ರ ಆಸನ ಭರ್ತಿಗೆ ಅವಕಾಶ ನೀಡಿರುವಂತೆ ಸಿನಿಮಾ ಮಂದಿರಗಳಲ್ಲಿಯೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.
ನಾವೆಲ್ಲಾ ಶಾಸಕರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ, ಹೇಳಿಕೊಳ್ಳೋಕೂ ಆಗಲ್ಲ : ಗೂಳಿಹಟ್ಟಿ ಶೇಖರ್
ಬೆಂಗಳೂರು ನಗರದ ಕ್ಯಾಪಿಟಲ್ ಹೋಟೆಲ್ ನಲ್ಲಿ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಶಾಸಕರ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಮಾಲೋಚನೆ ನಡೆಸಿದರು.
ಈ ವೇಳೆ ಮಲೆನಾಡು ಭಾಗದ ಶಾಸಕರೊಬ್ಬರು, ಸಿನಿಮಾ ಥಿಯೇಟರ್, ಪಿವಿಆರ್ ಗಳಲ್ಲಿ ಶೇ.100ರಷ್ಟು ರಿಲ್ಯಾಕ್ಸೇಶನ್ ಕೊಡಬೇಕು.
ತಮಿಳುನಾಡಿನ ಮಾದರಿಯಲ್ಲಿ ರಿಲ್ಯಾಕ್ಸೇಶನ್ ಕೊಡಿ, ಪ್ರೇಕ್ಷಕರ ಸಂಖ್ಯೆ ಶೇ.50 ಇರುವುದನ್ನು ಶೇ.100 ಕ್ಕೆ ಹೆಚ್ಚಳ ಮಾಡಿ ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಿಎಂ ಬಿಎಸ್ ವೈ, ಶೀಘ್ರದಲ್ಲೇ ಆ ಬಗ್ಗೆ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









