ಗೃಹ ಸಚಿವರಿಗೆ “100” ವೀಕ್ಷಿಸಲು ಆಹ್ವಾನ ನೀಡಿದ ಚಿತ್ರತಂಡ
ಎವರ್ ಗ್ರೀನ್ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ ಅವರು ನಟಿಸಿ ನಿರ್ದೇಶಿಸಿರುವ ಬಹುನಿರೀಕ್ಷೆಯ “100” ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ.. ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ..
ಸಿನಿಮಾತಂಡವೂ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ.. ಈ ನಡುವೆ 100 ಸಿನಿಮಾ ತಂಡವು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನ ಭೇಟಿ ಭೇಟಿ ಮಾಡಿತ್ತು.. ಇಂದು ಬೆಳಗ್ಗೆ ಗೃಹ ಸಚಿವರನ್ನ ನಟ ರಮೇಶ್ ಅರವಿಂದ್ ಹಾಗು ನಿರ್ಮಾಪಕ ರಮೇಶ್ ರೆಡ್ಡಿ ಅವರು ಭೇಟಿ ಮಾಡಿ , 100 ಸಿನಿಮಾ ನೋಡಲು ಆಹ್ವಾನ ಕೊಟ್ಟಿದ್ದಾರೆ.
100 ಚಿತ್ರ ನವೆಂಬರ್ 19 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾ ಟ್ರೇಲರ್ ಹೇಳುವಂತೆ ಇದು ಪಕ್ಕಾ ಈಗಿನ ಜನರೇಷನ್ ಗೆ ತಕ್ಕ ಕಥೆ.. ಸೈಬರ್ ಕ್ರೈಮ್ ಎಲಿಮೆಂಟ್ಸ್ , ಸೋಷಿಯಲ್ ಮೀಡಿಯಾ, ಮೊಬೈಲ್ ನಿಂದಾಗುವ ಸಮಸ್ಯೆಗಳನ್ನ ಈ ಸಿನಿಮಾ ಮೂಲಕ ಬಿಚ್ಚಿಡಲಾಗ್ತಿದೆ..
ಮುಂದಿನ 48 ಗಂಟೆ ಮತ್ತಷ್ಟು ಚುರುಕಾಗಲಿದೆ ಮಳೆ
ರಮೇಶ ರೆಡ್ಡಿ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 100 ಸಾಮಾಜಿಕ ಜಾಲತಾಣದ ಮೇಲೆ ಬೆಳಕು ಚೆಲ್ಲುತ್ತಿರುವ ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಸ್ಪೆನ್ಸ್ , ಥ್ರಿಲ್ಲರ್ , ಆಕ್ಷನ್ ಸೀನ್ಸ್ ಗೆ ಕೊರತೆಯಿಲ್ಲ ಅಂತ ಟ್ರೇಲರ್ ನೋಡಿ ಅಂದಾಜಿಸಬಹುದು.. ರವಿ ಬಸ್ರೂರು ಅವರ ಬಿಜಿಎಮ್ ಸಿನಿಮಾಗೆ ಜೀವ ತುಂಬಿದೆ..