ಚಿತ್ರಮಂದಿರದಲ್ಲಿ 100% ಸೀಟು ಭರ್ತಿಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್..!
ಸಿನಿಪ್ರಿಯರಿಗೆ, ಸಿನಿಮಾರಂಗದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಶೀಘ್ರವೇ ಸಿಗಲಿದೆ. ಕೊರೊನಾ ಹಾವಳಿಯಿಂದಾಗಿ ಸುಮಾರು 7-8 ತಿಂಗಳುಕಾಲ ಬಂದ್ ಸಿನಿಮಾ ಥಿಯೇಟರ್ ಗಳು ಬಂದ್ ಆಗಿ ಸಿನಿಮಾರಂಗವೇ ನೆಲಕಚ್ಚಿತ್ತು. ಆದ್ರೆ ಅಕ್ಟೋಬರ್ 15 ರಂದು ಚಿತ್ರಮಂದಿರಗಳು ತೆರೆದಿದ್ದವು ಆದ್ರೂ ಪೂರ್ಣ ಪ್ರಮಾಣದ ಸೀಟಿಂಗ್ ಗೆ ಅನುಮತಿ ನೀಡಿರಲಿಲ್ಲ. ಕೇವಲ 50% ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ನೋಡಲು ಅವಕಾಶ ನೀಡಲಾಗಿತ್ತು. ಆದ್ರೆ ಇದೀಗ ಶೇ.100 ರಷ್ಟು ಸೀಟಿಂಗ್ ಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ.
‘ಆಸ್ಕರ್ ರೇಸ್’ ನಲ್ಲಿ ದಕ್ಷಿಣ ಭಾರತದ ಮತ್ತೊಂದು ಸಿನಿಮಾ : ಯಾವುದು ಗೊತ್ತಾ..!
ಹೌದು. ಈಗ ಈ ನಿಯಮವನ್ನು ಕೇಂದ್ರ ಹಿಂಪಡೆಯುತ್ತಿದೆ ಎನ್ನಲಾಗ್ತಿದೆ. ಕೇಂದ್ರ ಗೃಹ ಸಚಿವಾಲಯ ನೀಡಿರುವ ಸೂಚನೆಯಂತೆ, ಚಿತ್ರಮಂದಿರಗಳು ತಮ್ಮ ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಒಮ್ಮೆಲೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬಹುದಾಗಿದೆ. ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಸಿನಿಮಾ ನೀಡಲು ಅವಕಾಶ ನೀಡುವ ಬಗ್ಗೆ ಪ್ರತ್ಯೇಕ ಎಸ್ ಒಪಿಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿರುವ ಕೇಂದ್ರ ಗೃಹ ಸಚಿವಾಲಯವು ಎಲ್ಲ ಚಿತ್ರಮಂದಿರಗಳು ಅದನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಕೂಡ ತಿಳಿಸಿದೆ.
14 ವರ್ಷದ ಬಾಲಕಿಗೆ ಮದ್ಯ ಕುಡಿಸಿ ರೇಪ್ : ಫುಟ್ ಬಾಲ್ ಮಾಜಿ ಆಟಗಾರ ಅಂದರ್
ಇನ್ನೂ ಪೂರ್ಣ ಸೀಟಿಂಗ್ ಗೆ ಅವಕಾಶ ನೀಡಿದ ಬಳಿಕ ಪ್ರೇಕ್ಷಕರು ಮಾಸ್ಕ್ ಬಳಕೆ, ಚಿತ್ರಮಂದಿರಗಳ ಒಳಹೋಗುವ ಮುನ್ನಾ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರುಯತ್ತೆ. ಇನ್ನುಳಿದ ಸ್ವಚ್ಛತಾ ಸಂಬಂಧಿ ವಿಷಯಗಳ ಬಗ್ಗೆ ಗೃಹ ಸಚಿವಾಲಯ ಹೊಸ ಸೂಚನೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಇನ್ನೂ ಸ್ಯಾಂಡಲ್ ವುಡ್ ವಿಚಾರಕ್ಕೆ ಬಂದ್ರೆ ಈಗಾಗಲೇ ಸ್ಟಾರ್ ನಟರ ಸಿನಿಮಾಗಳ ರಿಲೀಸ್ ಡೇಟ್ ಗಳು ಅನೌನ್ಸ್ ಆಗಿದೆ. ಈ ನಡುವೆ ಶೇ 100 ರಷ್ಟು ಸೀಟಿಂಗ್ ಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರೋದು ಸ್ಟಾರ್ ನಟರ, ಹೊಸ ಸಿನಿಮಾಗಳ ನಿರ್ಮಾಪಕರಿಗೆ ಬಿಗ್ ರಿಲೀಫ್ ನೀಡುತ್ತೆ. ಜೊತೆಗೆ ಸಿನಿಪ್ರೇಕ್ಷಕರಿಗೂ ಸಂತಸ ತರಲಿದೆ. ಫೆಬ್ರವರಿ ಮೊದಲನೇ ವಾರದಿಂದ ಹಿಡಿದು ಮೇ ವವರೆಗೂ ಸ್ಟಾರ್ ಸಿನಿಮಾಗಳ ಜಾತ್ರೆ ಆರಂಭವಾಗಲಿದೆ. ಪೊಗರು, ರಾಬರ್ಟ್, ಪ್ಯಾಂಟಮ್, ಸಲಗ, ಭಜರಂಗಿ -2, ಕೋಟಿಗೊಬ್ಬ 3, ಯುವರತ್ನ ಸೇರಿದಂತೆ ಅನೇಕ ಸಿನಿಮಾಗಳು ಬೆಳ್ಳಿ ತೆರೆಗಪ್ಪಳಿಸಲು ಸಜ್ಜಾಗಿ ನಿಂತಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel