ಶುಕ್ರವಾರ ರಾಜ್ಯದಲ್ಲಿ 101 ಮಂದಿ ಕೊರೋನಾಗೆ ಬಲಿ – 6,670 ಹೊಸ ಕೊರೋನಾ ಪ್ರಕರಣಗಳು
ಬೆಂಗಳೂರು, ಅಗಸ್ಟ್ 8: ಕರ್ನಾಟಕದಲ್ಲಿ ಶುಕ್ರವಾರ 6,670 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. ಜೊತೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿಗೆ 101 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕುಗಳ ಸಂಖ್ಯೆ 1,64,924 ಏರಿಕೆ ಕಂಡಿದ್ದು, ಸಾವಿನ ಸಂಖ್ಯೆ 2,998 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 3,951 ಸೋಂಕಿತರು ಚಿಕಿತ್ಸೆಯ ಬಳಿಕ ಚೇತರಿಕೆ ಕಂಡಿದ್ದು, ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಆಗಸ್ಟ್ 7 ರ ಸಂಜೆ ವೇಳೆಗೆ, 1,64,924 ಸಕಾರಾತ್ಮಕ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 2,998 ಸಾವುಗಳು ಮತ್ತು 84,232 ಡಿಸ್ಚಾರ್ಜ್ ಪ್ರಕರಣಗಳು ಸೇರಿವೆ ಎಂದು ಬುಲೆಟಿನ್ ತಿಳಿಸಿದೆ. 77,686 ಸಕ್ರಿಯ ಪ್ರಕರಣಗಳಲ್ಲಿ 77,008 ರೋಗಿಗಳು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ನಲ್ಲಿದ್ದು, 678 ಮಂದಿ ತೀವ್ರ ನಿಗಾ ಘಟಕ (ಐಸಿಯು)ನಲ್ಲಿ ಇದ್ದಾರೆ.
ಶುಕ್ರವಾರ ರಾಜ್ಯದಲ್ಲಿ ಕೊರೋನಾಗೆ ಬಲಿಯಾದ 101 ಪ್ರಕರಣಗಳಲ್ಲಿ 22 ಪ್ರಕರಣಗಳು ಬೆಂಗಳೂರು ನಗರದಿಂದ ವರದಿಯಾಗಿದ್ದರೆ, ನಂತರ ಮೈಸೂರು 15, ಹಾಸನ ಮತ್ತು ಧಾರವಾಡ 9, ಕಲಬುರಗಿ ಮತ್ತು ದಕ್ಷಿಣ ಕನ್ನಡ 7, ಬಳ್ಳಾರಿ ಮತ್ತು ಉಡುಪಿ 5, ಕೊಪ್ಪಳ ಮತ್ತು ಕೋಲಾರ 3, ಬೆಳಗಾವಿ, ರಾಯಚೂರು , ದಾವಣಗೆರೆ, ಗದಗ ಮತ್ತು ಚಿಕ್ಕಮಗಳೂರು 2, ಶಿವಮೊಗ್ಗ, ಹಾವೇರಿ, ಬೀದರ್, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರದಿಂದ 1 ಪ್ರಕರಣಗಳು ದಾಖಲಾಗಿದೆ.
ಬೆಂಗಳೂರು ನಗರ 2,147, ಬಳ್ಳಾರಿ 684, ಬೆಳಗಾವಿ 390, ಕಲಬುರಗಿ 271, ಧಾರವಾಡ 266, ಉಡುಪಿ 246, ಮೈಸೂರು 242, ಕೊಪ್ಪಳ 173, ರಾಯಚೂರು 171, ದಕ್ಷಿಣ ಕನ್ನಡ 166 ಮತ್ತು ಶಿವಮೊಗ್ಗ 151 ಹೊಸ ಪ್ರಕರಣಗಳು ವರದಿಯಾಗಿದೆ.