ಪ್ರವಾಸಿಗರನ್ನ ರೋಮಾಂಚನಗೊಳಿಸುತ್ತದೆ ಶಿವಗಂಗೆ ಬೆಟ್ಟ..!
ಪ್ರವಾಸದ ಜೊತೆಗೆ ಟ್ರಕ್ಕಿಂಗ್ ಕ್ರೇಜ್ ಇರುವವರಿಗೆ ಹೇಳಿ ಮಾಡಿಸಿದ ತಾಣ ಅಂದ್ರೆ ಅದು ಶಿವಗಂಗೆ.
ಸುಮಾರು 804.8 ಮೀಟರ್ ಅಥವಾ 2640.3 ಅಡಿ ಎತ್ತರವಿರುವ ಶಿವಗಂಗೆ ಕ್ಷೇತ್ರವು ಒಂದು ಸಾಹಸ ಮತ್ತು ಭಕ್ತಿಯ ಕೇಂದ್ರ.
ಈ ಸುಂದರ ಪರ್ವತ ಶಿಖರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ಪೇಟೆಯಿಂದ 7 ಕಿ.ಮೀ ದೂರದಲ್ಲಿ ಹಾಗೂ ಬೆಂಗಳೂರುನಿಂದ 56 ಕಿ.ಮೀ ದೂರದಲ್ಲಿದೆ.
ಬೆಂಗಳೂರಿಗರು ಒನ್ ಡೇ ಟ್ರಿಪ್ ಪ್ಲಾನ್ ಮಾಡ್ತಿದ್ರೆ ಶಿವಗಂಗೆ ಉತ್ತಮ ಆಯ್ಕೆ. ಇಲ್ಲಿ ಫ್ಯಾಮಿಲಿ ಫ್ರೆಂಡ್ಸ್ ಜೊತೆಗೆ ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಬಮದು ಟೈಮ್ ಪಾಸ್ ಮಾಡ್ತಿದ್ದಾರೆ. ಸುಂದರ ಶಿವಗಂಗೆಯು ಭಕ್ತಿ ಪ್ರಧಾನ ತೀರ್ಥ ಯಾತ್ರೆ ಮತ್ತು ಅಡ್ವೈಂಚರ್ ಪ್ರೇಕ್ಷಣೀಯ ತಾಣವಾಗಿದೆ.
ಇನ್ನೂ ಈ ಬೆಟ್ಟದ ಮತ್ತೊಂದು ವಿಶೇಷ ನಿಜಕ್ಕೂ ಮೈ ನವಿರೇಳಿಸುತ್ತೆ. ಯಾಕಂದ್ರೆ ಈ ಬೆಟ್ಟ ದೂರದಿಂದ ಥೇಟ್ ಶಿವಲಿಂಗದ ಆಕಾರದಲ್ಲಿ ಕಾಣುತ್ತದೆ. ಹೀಗಾಗಿಯೇ ಈ ಬೆಟ್ಟವನ್ನು ಶಿವಗಂಗೆ ಎಂದು ಕರೆಯುತ್ತಾರೆ. ಇನ್ನೂ ಶಿವಗಂಗೆಯಲ್ಲಿನ ನಂದಿ ಕಲ್ಲಿನ ಕೆತ್ತನೆಯು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ.
ಅಲ್ಲದೇ ಐತಿಹಾಸಿಕ ಗಂಗಾಧರೇಶ್ವರ, ಹೊನ್ನದೇವಿ ದೇವಸ್ಥಾನ, ಒಳಕಲ್ಲು ತೀರ್ಥ ನಂದಿ ಪ್ರತಿಮೆ ಪಾತಳ ಗಂಗೆ, ಇವುಗಳ ಸಂಗಮದಿಂದ ಈ ಸ್ಥಳಕ್ಕೆ ಅದರದ್ದೇ ಆದ ಹಿರಿಮೆಯಿದೆ. ಇನ್ನೂ ಇನ್ನೂ ಟ್ರಕ್ಕಿಂಗ್ ಪ್ರಿಯರಿಗೆ ಚಾರಣಕ್ಕೆ ಈ ಸ್ಥಳ ಅತ್ಯಂತ ಸೂಕ್ತ. ಹಾಗೂ ಪ್ರವಾಸಿಗರಿಗೆ ರೋಮಾಂಚನಕಾರಿ ಅನುಭವ ನೀಡುತ್ತೆ.
ಏಕಶಿಲಾ ನಂದಿ
ಬೆಟ್ಟದ ತುದಿಯಲ್ಲಿ ಒಂದೇ ಏಕಶಿಲೆಯ ಕಲ್ಲಿನಿಂದ ನಿರ್ಮಿಸಲಾದ ನಂದಿಯ ವಿಗ್ರಹವಿದೆ.
ಈ ವಿಗ್ರಹ ಪ್ರವಾಸಿಗರು, ಚಾರಣಿಗರನ್ನ ಆಕರ್ಷಿಸುತ್ತೆ. ಶಿವಗಂಗೆ ಆರೋಹಿಗಳಿಗೆ ಅತ್ಯಾಕರ್ಷಕ ಮತ್ತು ಕಠಿಣ ಚಾರಣವನ್ನು ನೀಡುತ್ತದೆ.
ದೇವಾಲಯಗಳನ್ನು ಸಂಪರ್ಕಿಸುವ ಮಾನವ ನಿರ್ಮಿತ ಮೆಟ್ಟಲಿಲುಗಳಿವೆ. ಬೆಟ್ಟವು ಕಡಿದಾದಂತೆ ಏರುವ ದಾರಿ ಕಠಿಣವಾಗುತ್ತಾ ಹೋಗುತ್ತದೆ.
ಕಲ್ಲಿನ ಬೆಟ್ಟವಾಗಿರುವುದರಿಂದ, ಏರುವುದು ಕಷ್ಟ.. ಆದ್ರೆ ಅಲ್ಲಲ್ಲಿ ಆಹಾರದ ಅಂಗಡಿಯಿದೆ.
ಹೀಗಾಗಿ ಬೆಟ್ಟ ಹತ್ತಿ ಹಸಿವಾದರೆ ತಿನ್ನಲು, ದಣಿವಾದರೆ ನೀರು ಪಾನೀಯಗಳನ್ನ ತೆಗೆದುಕೊಳ್ಳಲು ಕಷ್ಟವಾಗುವುದಿಲ್ಲ.
ಒಲಕಲ್ ತೀರ್ಥ
ಶಿವಗಂಗೆ ಮತ್ತೊಂದು ಪವಾಡಕ್ಕೆ ಸಾಕ್ಷಿ. ಇಲ್ಲಿನ ಮತ್ತೊಂದು ವಿಶೇಷತೆಯೆಂದರೆ ಅದು ಒಲಕಲ್ ತೀರ್ಥ.