ಸಾಹಸಿ ಪ್ರಿಯರಿಗೆ ನಂ 1 ಟ್ರಕಿಂಗ್ ತಾಣ ಮಧುಗಿರಿ ಏಕಶಿಲಾ ಬೆಟ್ಟ
3,930 ಅಡಿ ಎತ್ತರದಲ್ಲಿರುವ ಮಧುಗಿರಿ ಏಕಶಿಲಾ ಬೆಟ್ಟ (Madhugiri hills) ಸಾಹಸಿ ಪ್ರಿಯರಿಗೆ ನಂ 1 ಟ್ರಕಿಂಗ್ ತಾಣ ಅಂದ್ರೆ ತಪ್ಪಾಗಲ್ಲ.
ಇದು ಏಷ್ಯಾದಲ್ಲೇ ಎರಡನೇ ದೊಡ್ಡ ಏಕಶಿಲಾ ಬೆಟ್ಟವೆಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ರಮಣೀಯ ತಾಣ..
ಬೆಟ್ಟದ ಕಡಿದಾದ ಇಳಿಜಾರಿನಲ್ಲಿರುವ ಕೋಟೆ ನೋಡಲು ನಿತ್ಯ ಪ್ರವಾಸಿಗರ ದಂಡೇ ಹರಿದುಬರುತ್ತೆ.
ಅಂಟಾರ್ಲಾಡ ಬಾಗುಲ್, ಡಿಡ್ಡಿಬಾಗಿಲು ಮತ್ತು ಮೈಸೂರು ಗೇಟ್ ಗಳು ಕೋಟೆಯ ಮೂರು ಗೇಟ್ ವೇಗಗಳಾಗಿವೆ.
ತುಮಕೂರಿನಲ್ಲಿರುವ ಈ ಸುಂದರ ತಾಣವು ಚಾರಣಕ್ಕೆ ಹೆಸರುವಾಸಿಯಾಗಿದೆ.
ಏಕ ಶಿಲೆಯಲ್ಲಿ ನಿರ್ಮಿಸಲಾಗಿರುವ ಈ ಬೆಟ್ಟವು ತುಮಕೂರಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ತುಮಕೂರು ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಈ ಮಧುಗಿರಿಬೆಟ್ಟ ಸಹ ಒಂದು.
ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯು ಒಂದು ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಈ ಸಣ್ಣ ಪಟ್ಟಣವು ತನ್ನ ಕೋಟೆ ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ.
ಮಧುಗಿರಿಯಲ್ಲಿ ವೆಂಕಟರಮಣ ಮತ್ತು ಮಲ್ಲೇಶ್ವರ ದೇವಾಲಯಗಳು ಈಗಲೂ ಪ್ರಸಿದ್ಧ. ಮಧುಗಿರಿ ಕೋಟೆಯ ಆವರಣದಲ್ಲಿ ಜೈನ ದೇವಾಲಯ ಕೂಡ ಇದೆ.
ಇನ್ನೂ ಮಧುಗಿರಿ ಸುತ್ತಲೂ ಇನ್ನೂ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅದರಲ್ಲಿ ಒಂದು ಚೆನ್ನಾರಾಯಣ ದುರ್ಗಾ..
ಉಳಿದಂತೆ ಸಿದ್ದರಾ ಬೆಟ್ಟ, ಶ್ರೀ ಸಿದ್ದಗಂಗಾ ಮಠ, ಚೆನ್ನಾರಾಯಣ ದುರ್ಗಕ್ಕೂ ಪ್ರವಾಸಿಗರು ವಿಸಿಟ್ ಮಾಡಬುದು.
ಕೋಟೆ ಒಳಗೆ, ಒಂದು ಸಣ್ಣ ದೇವಾಲಯ ಮತ್ತು ಅರ್ಧ ಹಾನಿಗೊಳಗಾದ ಹಳೆಯ ರಚನೆಗಳು ಕಾಣಿಲಿಕ್ಕೆ ಸಿಗುತ್ವೆ.
ಪಾಳುಬಿದ್ದಿರುವ ಗೋಪಾಲಕೃಷ್ಣನ ದೇವಸ್ಥಾನವು ಈ ಕೋಟೆಯ ಮೇಲಿದೆ.
ಇಲ್ಲಿಗೆ ಅಕ್ಟೋಬರ್ ಹಾಗೂ ಮಾರ್ಚ್ ನಡುವೆ ಭೇಟಿ ನೀಡುವುದು ಸೂಕ್ತ.
ಇನ್ನು ಚಾರಣಿಗರಿಗೆ ಈ ತಾಣ ತುಂಬ ಅಚ್ಚುಮೆಚ್ಚು. ಆದ್ರೆ ಈ ಬೆಟ್ಟದ ಮೇಲೆ ಹತ್ತಲು ಧೈರ್ಯವಿರಬೇಕು. ಆದರೆ ಹೆದರುವ ಅವಶ್ಯಕತೆಯಿಲ್ಲ.
ಯಾಕಂದ್ರೆ ಬೆಟ್ಟ ಹತ್ತಲು ಹ್ಯಾಂಡಲ್ ಬಾರ್ ಗಳಿವೆ. ಸವಾರಿಯ ಅರ್ಧದ ನಂತರ, ಆರೋಹಣವು ಕಡಿದಾದಂತಾಗುತ್ತದೆ ಮತ್ತು ಕೆಲವು ಹಂತಗಳಲ್ಲಿ, ಹ್ಯಾಂಡಲ್ ಬಾರ್ಗಳು ಇಲ್ಲ. ಆದರೆ ರಾಕ್-ಕಟ್ ಮೆಟ್ಟಿಲುಗಳು ಉದ್ದಕ್ಕೂ ಇವೆ.
ಕೆಲವು ಹಂತಗಳಲ್ಲಿ, ಬಂಡೆಗಳಿಂದ ನಿರ್ಮಿಸಲಾದ ಮೆಟ್ಟಿಲುಗಳೂ ಇಲ್ಲ. ಆದರೂ ನೀವು ಸುಲಭವಾಗಿ ಬೆಟ್ಟವನ್ನು ಹತ್ತಬಹುದು.
ಇನ್ನೂ ಇಲ್ಲಿಗೆ ತಲುಪಲು ಸಮೀಪದ ರೈಲು ನಿಲ್ದಾಣವೆಂದರೆ ತುಮಕೂರು ಜಂಕ್ಷನ್.
ಬೆಂಗಳೂರಿನಿಂದ ಮಧುಗಿರಿಗೆ ತಲುಪುವುದಾದರೆ ಸಾಕಷ್ಟು ದಾರಿಗಳಿವೆ.
ಅನೇಕ ಖಾಸಗಿ ಹಾಗೂ ಸರ್ಕಾರಿ ಬಸ್ ಗಳ ವ್ಯವಸ್ಥೆ ಇದೆ.
ಪ್ರತಿ ೨೫ ನಿಮಿಷಕ್ಕೊಮ್ಮೆ ಮೆಜೆಸ್ಟಿಕ್ನಿಂದ ಕೆಎಸ್ಆರ್ಟಿಸಿ ಬಸ್ಗಳು ಲಭ್ಯವಿದೆ.









