ರನ್ ಮಷಿನ್ ವಿರಾಟ್ ಕೊಹ್ಲಿಯ ಲಂಬೋರ್ಘಿನಿ ಕಾರು ಮಾರಾಟಕ್ಕೆ..!
ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಬಳಸುತ್ತಿದ್ದ ಲಂಬೋರ್ಘಿನಿ ಗಲ್ಲಾರ್ಡೊ ಸ್ಪೈಡರ್ ಕಾರನ್ನು ಇದೀಗ ಮಾರಾಟಕ್ಕಿಡಲಾಗಿದೆ. 2015 ರಲ್ಲಿ ಕೊಹ್ಲಿ ಬಳಸಿದ ಆಟೋಮೊಬೈಲ್ ಕಾರ್ ಇದಾಗಿದೆ. ಮತ್ತು ಈ ಕಾರನ್ನು ಪ್ರಸ್ತುತ INR 1.35 ಕೋಟಿಗಳಿಗೆ ಮಾರಾಟಕ್ಕಿಡಲಾಗಿದೆ. ಈ ಕಾರು ಕೇವಲ 4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ತಲುಪಬಲ್ಲ ಸಾಮರ್ಥ್ಯ ಹೊಂದಿದೆ.
ಅಲ್ಪಾವಧಿಗೆ ಅದನ್ನು ಬಳಸಿದ ನಂತರ, ಕೊಹ್ಲಿ ಕಾರನ್ನು ಮಾರಿದ್ದರು. ರಾಯಲ್ ಡ್ರೈವ್‌ನಲ್ಲಿರುವ ಮಾರ್ಕೆಟಿಂಗ್ ಮ್ಯಾನೇಜರ್, ಕೊಚ್ಚಿಯಲ್ಲಿರುವ ಒಂದು ಕಂಪನಿಯು ಈ ಕಾರು ಈಗ ಮಾರಾಟಕ್ಕಿದೆ ಎಂದು ಖಚಿತಪಡಿಸಿದೆ. ಅಲ್ಲದೇ ಈ ಕಾರು ಇಲ್ಲಿಯವರೆಗೂ ಕೇವಲ 10000 ಕಿಮೀ ಓಡಿದೆ. ಈ ಕಾರನ್ನು ಈ ವರ್ಷ ಜನವರಿಯಲ್ಲಿ ರಾಯಲ್ ಡ್ರೈವ್‌ನಿಂದ ಕೋಲ್ಕತ್ತಾ ಮೂಲದ ಕಾರ್ ಡೀಲರ್‌ನಿಂದ ಖರೀದಿಸಲಾಗಿದೆ ಎಂದು ಮಾರ್ಕೆಟಿಂಗ್ ಮ್ಯಾನೇಜರ್ ತಿಳಿಸಿದ್ದಾರೆ.
ಇದು 2013 ರ ಮಾದರಿ ಲಂಬೋರ್ಘಿನಿಯಾಗಿದ್ದು, ರನ್ ಮಷಿನ್ ವಿರಾಟ್ ಬಳಸಿದ್ದ ಕಾರ್ ಆಗಿದೆ. ಇದು 10,000 ಕಿಮೀ ವರೆಗೆ ಮಾತ್ರ ಓಡಿದೆ. ನಾವು ಈ ಸೆಲೆಬ್ರಿಟಿ ಕಾರನ್ನು ಕೋಲ್ಕತ್ತಾ ಮೂಲದ ಪ್ರೀಮಿಯಂ ಮತ್ತು ಐಷಾರಾಮಿ ಮುಂಚೂಣಿಯ ಕಾರ್ ಡೀಲರ್‌ನಿಂದ ಜನವರಿ 2021 ರಲ್ಲಿ ಖರೀದಿಸಿದ್ದೇವೆ ಎಂದು ಮಾರ್ಕೆಟಿಂಗ್ ಮ್ಯಾನೇಜರ್ ಹೇಳಿಕೊಂಡಿದ್ದಾರೆ.
ಟಿ-20 | ಹೊಸ ದಾಖಲೆಯತ್ತ ಹಿಟ್ ಮ್ಯಾನ್
ಇತ್ತೀಚೆಗೆ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2021 ರ ಆವೃತ್ತಿಯ ಮುಕ್ತಾಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಮತ್ತು, ಆರ್‌ಸಿಬಿ ಫ್ರಾಂಚೈಸ್‌ನ ಅಧಿಕೃತ ಟ್ವಿಟರ್ ಕೂಡ ಇದನ್ನು ಖಚಿತಪಡಿಸಿದೆ. ಕೊಹ್ಲಿ ಅವರು ತಮ್ಮ ನಾಯಕತ್ವದ ಕರ್ತವ್ಯಗಳನ್ನು ತ್ಯಜಿಸಿದರೂ, ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯದವರೆಗೂ ಆರ್‌ಸಿಬಿ ಫ್ರಾಂಚೈಸಿಗಾಗಿ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ತಮ್ಮ ನಿರಂತರ ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಅವರು ಇತ್ತೀಚೆಗೆ ಭಾವನಾತ್ಮಕವಾಗಿ ಧನ್ಯವಾದ ಅರ್ಪಿಸಿದ್ದರು.
https://twitter.com/i/status/1439635618846281728
ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು 40 ರ ಸರಾಸರಿಯಲ್ಲಿ 6076 ರನ್ ಗಳಿಸಿದ್ದಾರೆ. ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ. ಅವರು ಭರ್ಜರಿ 973 ರನ್ ಗಳಿಸಿದರು ಮತ್ತು 2016 ರ ಐಪಿಎಲ್ ಆವೃತ್ತಿಯಲ್ಲಿ 81.08 ರ ಸರಾಸರಿಯಲ್ಲಿ ರನ್ ಗಳಿಸಿದ್ದರು. 2021 ರ ಸೆಪ್ಟೆಂಬರ್ 20 ರಂದು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಐಪಿಎಲ್ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಲು ವಿರಾಟ್ ಕೊಹ್ಲಿ ಪಡೆ ಸಜ್ಜಾಗ್ತಿದೆ.








