ರಾಜ್ಯದಲ್ಲಿ ಹೆಚ್ಚಾಗ್ತಿದೆ ವೈರಲ್ ಫೀವರ್ ಆತಂಕ : ಚಿಕಿತ್ಸೆ ಅಗತ್ಯ..!
ರಾಜ್ಯದಲ್ಲಿ ಒಂದೆಡೆ ಕೊರೊನಾ ಹಾವಳಿ , ದಿನೇ ದಿನೇ ಸೋಂಕಿತರ ಸಂಖ್ಯೆಗಳ ಏರಿಳಿತ ಮುಂದುವರೆದಿದೆ. 3ನೇ ಅಲೆಯ ಭೀತಿ ನಡುವೆ ಇದೀಗ ವೈರಲ್ ಜ್ವರದ ಆತಂಕವೂ ಜನರನ್ನ ಕಾಡತೊಡಗಿದೆ. ಡೆಂಗ್ಯೂ , ಮಲೇರಿಯಾ , ಚಿಕನ್ ಗುನ್ಯಾ ಸೇರಿದಂತೆ ಇನ್ನೂ ಹಲವಾರು ವೈರಲ್ ಫೀವರ್ ಗಳ ಹೆಚ್ಚದಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಮತ್ತೊಂದೆಡೆ ಹೆಚ್ಚಿನ ಜನ ಮೂಡನಂಬಿಕೆಯಿಂದ ಕೆಲ ಅಸಂಬದ್ಧ ಕಾರ್ಯಗಳನ್ನ ಮಾಡುತ್ತಿದ್ದಾರೆ. ಆದ್ರೆ ಇವುಗಳಿಂದ ವೈರಲ್ ಫೀವರ್ ಕಡಿಮೆಯಾಗುವುದಿಲ್ಲ. ಬದಲಲಾಗಿ ಚಿಕಿತ್ಸೆ ಅಗತ್ಯ ಎಂದು ತಮುಕೂರಿನ ಜಿಲ್ಲಾಧಿಕಾರಿಗಳಾದ ವೈ ಎಸ್ ಪಾಟೀಲ್ ಅವರು ಸಲಹೆ ನೀಡಿದ್ದಾರೆ. ಅಲ್ಲದೇ ಜನರನ್ನ ಕೆಲವರು ಪೂಜೆ , ಪುನಸ್ಕಾರ , ಮಾಠ , ಮಂತ್ರದ ಹೆಸರಲ್ಲಿ ಯಾಮಾರಿಸುತ್ತಿದ್ದಾರೆ. ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದೇ ವೇಳೆ ಮಾತನಾಡಿ ಬಹುತೇಕರು ವೈದ್ಯಕೀಯ ಚಿಕಿತ್ಸೆ ನಿರ್ಲಕ್ಷಿಸಿ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಗುಣಪಡಿಸಲು ದೇವಸ್ಥಾನಗಳ ಮೊರೆ ಹೋಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ರೋಗ ಗುಣಪಡಿಸಲು ದೇವಸ್ಥಾನಗಳಿಗೆ ಹೋಗದೆ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ಮೌಢ್ಯತೆಯಿಂದ ರೋಗ ಗುಣಪಡಿಸುವ ಪ್ರಸಂಗಗಳು ಕಂಡುಬಂದಲ್ಲಿ ಸಾರ್ವಜನಿಕರು ಸ್ಥಳೀಯ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.








