2028ಕ್ಕೆ ಹಿಂದೂ – ಮುಸ್ಲಿಂ ಜನಸಂಖ್ಯೆ ಸಮ : ಮೋದಿ, ಓವೈಸಿ ವಿರುದ್ಧ ಹರಿಹಾಯ್ದ ದಿಗ್ವಿಜಯ್ ಸಿಂಗ್
2028ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯೂ ಹಿಂದೂ ಜನಸಂಖ್ಯೆಗೆ ಸಮವಾಗಲಿದೆ. ಎರಡೂ ಧರ್ಮದ ಜನಸಂಖ್ಯೆ ಒಂದೇ ಆಗಲಿದ್ದು, ಆಗ ದೇಶದ ಜನಸಂಖ್ಯೆ ಸ್ಥಿರಗೊಳ್ಳುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಇದೇ ವಿಚಾರ ಸಂಬಂಧ ಕಾಂಗ್ರೆಸ್ ನಾಯಕ ದಿಗ್ವಜಯ್ ಸಿಂಗ್ ಪ್ರತಿಕ್ರಿಯಿಸಿ ಮೋದಿ , ಬಿಜೆಪಿ , ಅಸಾದುದ್ದೀನ್ ಓವೈಸಿ ವಿರುದ್ಧ ಕಿಡಿಕಾರಿದ್ದಾರೆ.
ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಧಾನಿ ಮೋದಿ ಮತ್ತು ಅಸಾದುದ್ದೀನ್ ಓವೈಸಿ ಅವರ ಹೇಳಿಕೆಗಳು ಪ್ರಚೋದನೆ ನೀಡ್ತಿವೆ. 2028 ರ ವೇಳೆಗೆ ಹಿಂದೂಗಳು ಹಾಗೂ ಮುಸ್ಲಿಮ್ ಜನಸಂಖ್ಯೆ ಸಮವಾಗಿರುತ್ತದೆ. ಆದ್ರೆ ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದಿದ್ದಾರೆ.
https://twitter.com/i/status/1440887822051790851
ಸದ್ಯ ಅಧ್ಯಯನವೊಂದರ ವರದಿ ಓದಿದ್ದು, ಇದು ಜನಗಣತಿ ದತ್ತಾಂಶವನ್ನು ಆಧರಿಸಿದೆ. 1951 ರ ನಂತ್ರ ಮುಸ್ಲಿಮರ ಫಲವತ್ತತೆ ದರವು ಇಳಿದಿದೆ. ಈ ಹಿಂದೆ ಈ ದರ ಹಿಂದುಗಳಿಗಿಂತ ಹೆಚ್ಚಿತ್ತು. ದೇಶದಲ್ಲಿ ಪ್ರಸ್ತುತ ಮುಸ್ಲಿಮರ ಫಲವತ್ತತೆ ದರವು ಶೇಕಡಾ 2.7 ರಷ್ಟಿದ್ದು, ಹಿಂದೂಗಳ ಈ ಪ್ರಮಾಣವು ಶೇಕಡಾ 2.3 ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದಿದ್ದಾರೆ. ಅಲ್ಲದೇ ಕೆಲವರು 10 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯು ಹಿಂದೂಗಳಿಗಿಂತ ಹೆಚ್ಚಾಗುತ್ತದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದು, ಇದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ಹೇಳಿದ್ದಾರೆ.
1951 ರಿಂದ 2011 ರವರೆಗಿನ ಆರು ದಶಕಗಳ ಜನಸಂಖ್ಯೆಯ ಡೇಟಾವನ್ನು ಒಳಗೊಂಡ ಪ್ಯೂ ಸಂಶೋಧನಾ ಕೇಂದ್ರದ ವರದಿಯು ಭಾರತದ ಒಟ್ಟಾರೆ ಜನಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದೆ, ಆದರೂ 1990 ರ ನಂತರ ಬೆಳವಣಿಗೆ ದರಗಳು ಕಡಿಮೆಯಾಗಿದೆ. ಹಿಂದೂಗಳು 304 ಮಿಲಿಯನ್ನಿಂದ 966 ಮಿಲಿಯನ್ಗೆ, ಮುಸ್ಲಿಮರು 35 ಮಿಲಿಯನ್ನಿಂದ 172 ಮಿಲಿಯನ್ಗೆ, ಕ್ರಿಶ್ಚಿಯನ್ನರು 8 ಮಿಲಿಯನ್ನಿಂದ 28 ಮಿಲಿಯನ್, ಸಿಖ್ಖರು 6.8 ಮಿಲಿಯನ್ನಿಂದ 20.8 ಮಿಲಿಯನ್, ಬೌದ್ಧರು 2.7 ಮಿಲಿಯನ್ನಿಂದ 8.4 ಮಿಲಿಯನ್ ಮತ್ತು ಜೈನರು 1.7 ಮಿಲಿಯನ್ನಿಂದ 4.5 ಮಿಲಿಯನ್ಗೆ ಬೆಳೆದಿದ್ದಾರೆ. 2000 ರ ದಶಕದಲ್ಲಿ ಹಿಂದುಗಳಲ್ಲಿನ ಬೆಳವಣಿಗೆ ಸುಮಾರು 24% ರಿಂದ ಸುಮಾರು 17% ಕ್ಕೆ ಇಳಿದಿದೆ, ಆದರೆ ಮುಸ್ಲಿಂ ಬೆಳವಣಿಗೆ ಸುಮಾರು 25% ಮತ್ತು ಕ್ರೈಸ್ತರಲ್ಲಿ ದರವು 16% ಕ್ಕೆ ಇಳಿದಿದೆ. ಭಾರತದ ಜನಸಂಖ್ಯೆಯಲ್ಲಿ 79.8% ಹಿಂದುಗಳು ಮತ್ತು ಮುಸ್ಲಿಮರು 14.2% ರಷ್ಟಿದ್ದಾರೆ ಎಂದು ವರದಿಯು ಕಂಡುಹಿಡಿದಿದೆ. ಮುಸ್ಲಿಂ ಜನಸಂಖ್ಯೆಯು 4% ಹೆಚ್ಚಾಗಿದ್ದರೆ ಹಿಂದುಗಳು 4% ರಷ್ಟು ಕಡಿಮೆಯಾಗಿದ್ದಾರೆ.
ಕಾಂಗ್ರೆಸ್ ಗೆ ಜೆಡಿಎಸ್ ಟಕ್ಕರ್ : `ಕೈ’ ಬಿಡಲಿದ್ದಾರೆ ಇಬ್ರಾಹಿಂ..!








