ಸಿಬಿಐ ವಶದಲ್ಲಿದ್ದ 103 ಕೆ.ಜಿ. ಚಿನ್ನ ನಾಪತ್ತೆ : ಹಾಗಾದ್ರೆ ಕದ್ದವರು ಯಾರು..!
ಚೆನ್ನೈ: ಸಿಬಿಐ ವಶದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕೆಜಿಗಟ್ಟಲೆ ಚಿನ್ನ ಇದೀಗ ನಾಪತ್ತೆಯಾಗಿದೆ. ತಮಿಳುನಾಡಿನಲ್ಲಿ ಸಿಬಿಐ ದಾಳಿ ನಡೆಸಿ ತನ್ನ ವಶಕ್ಕೆ ಪಡೆದುಕೊಂಡಿದ್ದ ಸುಮಾರು 45 ಕೋಟಿ ರೂ ಮೌಲ್ಯದ 103 ಕೆಜಿಗೂ ಅಧಿಕ ತೂಕದ ಚಿನ್ನ ನಾಪತ್ತೆಯಾಗಿದೆ.
ಹಾಗಾದ್ರೆ ಸಿಬಿಐನ ಸೇಫೆಸ್ಟ್ ತಿಜೋರಿಯಿಂದ ಚಿನ್ನ ನಾಪತ್ತೆಯಾಗಿದ್ದು, ಹೇಗೆ, ಕದ್ದವರು ಯಾರು, ಹೀಗೆ ಸಾಕಷ್ಟು ಅನುಮಾನಗಳು ಮೂಡಿವೆ. 2012ರಲ್ಲಿ ಚೆನ್ನೈನಲ್ಲಿನ ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದಾಗ 400.5 ಕೆಜಿ ತೂಕದ ಚಿನ್ನದ ಗಟ್ಟಿಗಳು ಮತ್ತು ಆಭರಣಗಳನ್ನು ಮುಟ್ಟುಗೋಲು ಹಾಕಿ, ಸುರಾನಾದ ಸೇಫ್ ಲಾಕರ್ ಮತ್ತು ವಾಲ್ಟ್‌ಗಳಲ್ಲಿ ಇವುಗಳನ್ನು ಇರಿಸಿದ್ದ ಸಿಬಿಐ, ಅದಕ್ಕೆ ಬೀಗ ಹಾಕಿ ಸೀಲ್ ಮಾಡಿತ್ತು.
‘ಏರ್ ಶೋ’ ವೀಕ್ಷಣೆಗಾಗಿ ಕಾಯುತ್ತಿದ್ದ ಸಾರ್ವಜನಿಕರಿಗೆ ಭಾರೀ ನಿರಾಸೆ..!
ಸಿಬಿಐ ಪ್ರಕರಣಗಳಿಗಾಗಿ ಇರುವ ಚೆನ್ನೈನ ಪ್ರಿನ್ಸಿಪಲ್ ವಿಶೇಷ ನ್ಯಾಯಾಲಯಕ್ಕೆ ಇದರ ಎಲ್ಲ 72 ಕೀಗಳನ್ನು ಒಪ್ಪಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ. ಚಿನ್ನ ಮುಟ್ಟುಗೋಲು ಸಮಯದಲ್ಲಿ ಗಟ್ಟಿಗಳನ್ನು ಜತೆಗೂಡಿ ತೂಕ ಮಾಡಲಾಗಿತ್ತು. ಆದರೆ ಅದನ್ನು ಸುರಾನಾ ಮತ್ತು ಎಸ್‌ಬಿಐ ನಡುವಿನ ಸಾಲವನ್ನು ಪಾವತಿಸುವ ಕಾರ್ಯಕ್ಕೆ ನೇಮಿಸಲಾದ ಮಧ್ಯಸ್ಥಿಕೆದಾರರಿಗೆ ಹಸ್ತಾಂತರಿಸುವಾಗ ವೈಯಕ್ತಿಕವಾಗಿ ತೂಕ ನಡೆಸಲಾಗಿದೆ. ಈ ಸಂದರ್ಭದಲ್ಲಿಯೇ ಅವ್ಯವಹಾರ ನಡೆದಿರಬಹುದು ಎಂಬುದು ಸದ್ಯ ಸಿಬಿಐ ಆರೋಪವಾಗಿದೆ. ಆದ್ರೆ ಮದ್ರಾಸ್ ಹೈಕೋರ್ಟ್ ಸಿಬಿಐನ ಹೇಳಿಕೆಯನ್ನ ಒಪ್ಪಲು ನಿರಾಕರಿಸಿದೆ. ಈ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಪ್ರಕಾಶ್ ಅವರಿದ್ದ ಪೀಠ ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದು, ಎಸ್‌ಪಿ ಶ್ರೇಣಿಯ ಅಧಿಕಾರಿಯು ಆರು ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel