ಭಿಕ್ಷೆ ಅಂದುಕೊಂಡ್ರು ಪರವಾಗಿಲ್ಲ ಸಹಾಯ ಬೇಕು – ನಟಿ ವಿಜಲಕ್ಷ್ಮಿ ಕಣ್ಣೀರು
ನಟಿ ವಿಜಯಲಕ್ಷ್ಮಿ ತಾಯಿ ವಯೋಸಹಜವಾದ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದೀಗ ನಟಿ ವಿಜಯಲಕ್ಷ್ಮಿ ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ ಎಂದಿದ್ದಾರೆ. ಮಾಧ್ಯಮದವರೊಂದಿಗೆ ಈ ಮಾತನಾಡಿದ ನಟಿ, ಚೆನ್ನೈಯಲ್ಲಿ ಸಮಸ್ಯೆ ಆಗಿ ತಾಯಿ, ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದೇನೆ. ಅಕ್ಕ, ತಾಯಿ ನನ್ನ ಮಕ್ಕಳ ಸಮವಾಗಿದ್ದಾರೆ. ಬೆಳಗ್ಗೆ 12 ಗಂಟೆಗೆ ಅಮ್ಮ ಮೃತಪಟ್ಟಿದ್ದು, ನನಗೆ ಆಘಾತ ಆಗಿದೆ. ಜೀವನದಲ್ಲಿ ಸಾಕಷ್ಟು ಹೊಡೆತ ತಿಂದಿದ್ದೇನೆ. ನೀವೆಲ್ಲ ಜೊತೆಗೆ ಇದ್ದೀರಾ. ಅನಾಥ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸುತ್ತೇವೆ. ನನ್ನ ಅಕ್ಕ ಉಷಾ ಅವರಿಗೆ ಚಿಕಿತ್ಸೆ ಕೊಡಬೇಕು. ನನ್ನ ಅಕ್ಕನಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಮಾತನಾಡೋದು ಒರಟು ಅನ್ನಿಸಬಹುದು. ಅಕ್ಕನಿಗೆ ಎಲ್ಲಾ ರೀತಿಯ ಸೇವೆ ನಾನು ಮಾಡುತ್ತಿದ್ದೇನೆ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ಅಮ್ಮ ಬಿಟ್ಟು ಹೋದ ಮೇಲೆ ನಾನು ಬದಲಾಗುತ್ತೇನೆ. ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ ಇಲ್ಲೇ ಜೀವನ ಸಾಗಿಸುತ್ತೇನೆ. ಅಕ್ಕನಿಗೆ ಸಮಸ್ಯೆ ಆದ ಮೇಲೆ ಅಮ್ಮ ಮಾನಸಿಕವಾಗಿ ನೊಂದಿದ್ದರು. ನೀವೆಲ್ಲಾ ಇದ್ದೀರ, ನಾನು ಧೈರ್ಯವಾಗಿ ಇರುತ್ತೇನೆ ಎಂದಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಿಜಯಲಕ್ಷ್ಮಿ ನಂತರ ತಮಿಳಿನಲ್ಲಿ ಅವಕಾಶಗಳು ಹೆಚ್ಚಾದ ಬೆನ್ನಲ್ಲೇ ಅಲ್ಲಿಗೆ ಹೋಗಿ ತಮಿಳುನಾಡಿನಲ್ಲಿಯೇ ಉಳಿದುಕೊಂಡಿದ್ದರು. ಎಷ್ಟೋ ವರ್ಷಗಳಿಂದ ಹೆಚ್ಚು ಸುದ್ದಿಯಲ್ಲಿರದ ವಿಜಯಲಕ್ಷ್ಮಿ ಕೆಲ ದಿನಗಳಿಂದ ಬರೀ ವಿವಾದಗಳಿಂದಳೇ ಸುದ್ದಿಯಲ್ಲಿದ್ದಾರೆ. ಆತ್ಮಹತ್ಯೆ ಯತ್ನ , ಮತ್ತು ಹಲವರ ವಿರುದ್ಧ ಆರೋಪಗಳ ಹೊರೆಸುವ ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋದಾಗಿ ಹೇಳುತ್ತಾ ಅನೇಕರ ಬಳಿ ನೆರವಿಗಾಗಿ ಮನವಿ ಮಾಡಿಕೊಳ್ತಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಿದ್ದಾರೆ.
ಆದ್ರೆ ಅದೆಷ್ಟೋ ಜನ ನೆಟ್ಟಿಗರು ವಿಜಯಲಕ್ಷ್ಮಿಗೆ ಸಹಾಯಾಸ್ತ ಚಾಚಿದ್ದು, ಇನ್ನೂ ಅನೇಕರು ಆಕೆಯದ್ದು ಬರೀ ಇದೇ ಗೋಳಾಯ್ತು. ಸಿನಿಮಾರಂಗದಲ್ಲಿ ಸಂಪಾದನೆ ಮಾಡಿದ್ದೆಲ್ಲಾ ಎಲ್ಲಿಗೆ ಹೋಯ್ತು ಅಂತೆಲ್ಲಾ ಟ್ರೋಲ್ ಮಾಡ್ತಾಯಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗೆ ವಿಜಯಲಕ್ಷ್ಮಿ ಮತ್ತೊಮ್ಮೆ ಟ್ರೋಲ್ ಆಗುವಂತಾಗಿತ್ತು.
ಹೌದು… ಅಭಿಮಾನಿಯೊಬ್ಬರು ವಿಜಯಲಕ್ಷ್ಮಿಗೆ ಸಹಾಯ ಮಾಡಿದ್ದರು. ವಿಜಯಲಕ್ಷ್ಮಿಗೆ ಉಳಿದುಕೊಳ್ಳಲು ಮನೆಯನ್ನು ಉಚಿತವಾಗಿ ನೀಡಿದ್ರು. ಆದ್ರೆ ಇಲ್ಲೂ ಕೂಡ ತಕರಾರು ತೆಗೆದಿರುವ ನಟಿ ಮನೆಯಲ್ಲಿ ಜಿರಳೆ ಹಲ್ಲಿ ಕಾಟ ಅಂತ ಹೇಳಿ ಕೇವಲ 5 ದಿನಗಳಿಗೆ ಮನೆ ತೊರೆದಿದ್ದಾರೆ..
ನಟಿ ವಿಜಯಲಕ್ಷ್ಮಿ ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ ತಮಗೆ ಕೋವಿಡ್ ಆಗಿದೆ, ಐಸೋಲೇಷನ್ ಆಗಬೇಕು ಅಭಿಮಾನಿಗಳು ಯಾರಾದರೂ ನಮಗೆ ಮನೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ವಿಡಿಯೋ ನೋಡಿದ ಹೊನ್ನಾವರದ ಯುವತಿಯೊಬ್ಬರು ವಿಜಯಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಅವರ ಅಕ್ಕನನ್ನು ದಾಖಲಿಸಿದ್ದ ಆಸ್ಪತ್ರೆಯ ಬಿಲ್ ಅನ್ನೆಲ್ಲ ಭರಿಸಿ ಅವರನ್ನು ಕಾರಿನಲ್ಲಿ ಹೊನ್ನಾವರದ ಬಳಿಕ ಕರ್ಕಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಮ್ಮ ತಂದೆ, ಗ್ರಾಮ ಪಂಚಾಯಿತಿ ಸದಸ್ಯ ತುಕಾರಾಂ ನಾಯಕ್ ನೆರವಿನೊಂದಿಗೆ ಬಾಡಿಗೆ ಮನೆಯೊಂದನ್ನು ನೋಡಿ ಅದರಲ್ಲಿ ವಿಜಯಲಕ್ಷ್ಮಿ , ಅವರ ಅಕ್ಕ ಹಾಗೂ ತಾಯಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಕುಟುಂಬದ ಊಟದ ವ್ಯವಸ್ಥೆಯನ್ನು ತುಕಾರಾಂ ನಾಯಕ್ ಕುಟುಂಬದವರೇ ನೋಡಿಕೊಂಡಿದ್ದಾರೆ.
ಆ ಬಾಡಿಗೆ ಮನೆಯಲ್ಲಿ ಐದು ದಿನ ಇದ್ದ ವಿಜಯಲಕ್ಷ್ಮಿ ಮನೆಯ ಬಗ್ಗೆ ತಕರಾರು ತೆಗೆದಿದ್ದು, ಮನೆಯಲ್ಲಿ ಹಲ್ಲಿ ಇದೆ, ಜಿರಳೆ ಇದೆ ಎಂದು ಮನೆ ಬಿಟ್ಟು ಹೋಗಿದ್ದಾರೆ. ಎಲ್ಲಿಗೆ ಹೋಗುತ್ತೀರೆಂದು ಕೇಳಿದ್ದಕ್ಕೆ ತಾವು ವಿಜಯನಗರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ವಿಜಯಲಕ್ಷ್ಮಿ ಕುಟುಂಬಕ್ಕೆ ತುಕಾರಾಂ ಅವರೇ ಬಾಡಿಗೆ ಕಾರು ಮಾಡಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲಲ ಸಹಾಯ ಮಾಡಿದ್ದನ್ನ ಮರೆತು ತುಕಾರಾಂ ಅವರ ಜೊತೆಗೆ ಜಗಳ ಮಾಡಿಕೊಂಡಿದ್ದಾರಂತೆ. ಬಳಿಕ ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ ನೀಡಿರುವ ತುಕಾರಾಂ ಮನೆಯಿಂದ ಹೋಗುವ ಮುನ್ನಾ ತಮ್ಮ ಜೊತೆಗೆ ಜಗಳ ಆಡಿದ್ದಾರೆ ಎಂದಿದ್ದಾರೆ. ನನಗೆ ಸರಿಯಾದ ಮನೆ ಕೊಟ್ಟಿಲ್ಲ, ಮನೆ ಸರಿಯಾಗಿಲ್ಲ ಎಂದಿದ್ದಾರಂತೆ. ಅಲ್ಲದೆ ವಿಡಿಯೋ ಮಾಡಿ ನನಗೆ ಸರಿಯಾದ ಮನೆ ಕೊಟ್ಟಿಲ್ಲ, ಕನ್ನಡಿಗರು ನನಗೆ ನೋಡಿ ಎಂಥಹಾ ಮನೆ ಕೊಟ್ಟಿದ್ದಾರೆ ಮನೆಯಲ್ಲಿ ಹಲ್ಲಿ, ಜಿರಳೆಗಳೆಲ್ಲ ಇವೆ ಎಂದು ಹೇಳಿದ್ದಾರೆ ಎಂದು ತುಕಾರಾಂ ತಿಳಿಸಿದ್ದಾರೆ.