ಇಂದಿನಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಆರಂಭ
ಸಿಲಿಕಾನ್ ಸಿಟಿಯನ್ನ ವಾಯು ಮಾಲಿನ್ಯ ಮುಕ್ತಗೊಳಿಸುವಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದ್ದು, ಎಲೆಕ್ಟ್ರಿಕ್ ಸಾರಿಗೆ ಬಸ್ ಗಳನ್ನ ಪರಿಚಯಿಸಲಾಗಿದೆ. ಇನ್ನೂ ಇಂದಿನಿಂದ ಬೆಳಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಗಳು ಸಂಚರಿಸಲಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಇ – ಬಸ್ ಗೆ ಇಂದು ಚಾಲನೆ ಸಿಕ್ಕಿದೆ.
ಹೌದು.. ಮೊದಲ ಹಂತದಲ್ಲಿ 300 ಎಲೆಕ್ಟ್ರಿಕ್ ಬಸ್ಗಳಿಗೆ ಬಿಎಂಟಿಸಿ ಗುತ್ತಿಗೆ ನೀಡಿದೆ. ಎಲೆಕ್ಟ್ರಿಕ್ ಬಸ್ಗೆ 45 ನಿಮಿಷ ಚಾರ್ಜ್ ಮಾಡಿದರೆ 225 ಕಿ.ಮೀ ಸಂಚಾರ ಮಾಡಲಿದೆ. ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ಮೊದಲ ಬಸ್ ನಿಯೋಜನೆಗೊಂಡಿದೆ. ಅಂದ್ಹಾಗೆ NTPC ಮತ್ತು ಜೆಬಿಎಂ ಆಟೋ ಕಂಪನಿಗಳು ಜಂಟಿಯಾಗಿ 9 ಮೀಟರ್ ಉದ್ದದ 90 ನಾನ್-ಎಸಿ ಎಲೆಕ್ಟ್ರಿಕ್ ಬಸ್ ಗಳನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿವೆ.
ಇಂದು 10.30ಕ್ಕೆ ಎಲೆಕ್ಟ್ರಿಕ್ ಬಸ್ ಸೇವೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಸಾರಿಗೆ ಸಚಿವ ಶ್ರೀರಾಮುಲು ಕೆಂಗೇರಿ ಬಸ್ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಬಸ್ ಗಳಿಗೆ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ. ಉದ್ಘಾಟನೆ ಬಳಿಕ ರಾಮುಲು ಅವರು ಎಲೆಕ್ಟ್ರಿಕ್ ಬಸ್ನಲ್ಲಿ ನಗರದ ರೌಂಡ್ಸ್ ಹಾಕಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಬಸ್ಗೆ ಇಂದು ಚಾಲನೆ ದೊರೆತಿದೆ. ಮೊದಲ ಹಂತದಲ್ಲಿ 300 ಎಲೆಕ್ಟ್ರಿಕ್ ಬಸ್ಗಳಿಗೆ ಬಿಎಂಟಿಸಿ ಗುತ್ತಿಗೆ ನೀಡಿದೆ. ಎಲೆಕ್ಟ್ರಿಕ್ ಬಸ್ಗೆ 45 ನಿಮಿಷ ಚಾರ್ಜ್ ಮಾಡಿದರೆ 225 ಕಿ.ಮೀ ಸಂಚಾರ ಮಾಡಲಿದೆ.
ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ 90 ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು 2020ರ ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲೆಕ್ಟ್ರಿಕ್ ಬಸ್ನಲ್ಲಿ ಸುಮಾರು 30 – 35 ಪ್ರಯಾಣಿಕರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಈ ಎಲೆಕ್ಟ್ರಿಕ್ ಬಸ್ಗಳನ್ನು ಮುಖ್ಯವಾಗಿ ಈ ಮೆಟ್ರೋ ನಿಲ್ದಾಣಗಳಲ್ಲಿ ಬರುವಂತಹ ಪ್ರಯಾಣಿಕರಿಗೆ ಬೇರೆ ಏರಿಯಾಗಳಿಗೆ ಪ್ರಯಾಣಿಸಲು ಅನುಕೂಲವಾಗಲು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.