ಉತ್ತರ ಪ್ರದೇಶ ಸರ್ಕಾರದ ಯೋಜನೆಗೆ ಅಂಬಾಸಿಡರ್ ಆದ ಬಾಲಿವುಡ್ ‘ಕ್ವೀನ್’..!
ಸದಾ ಏನಾದರೂ ಒಂದು ವಿಚಾರದಿಂದ , ಯಾರಿಗಾದ್ರೂ ಬೈಯೋದು , ಟಾಂಗ್ ಕೊಡೋದು , ತಮಗೆ ಸಂಬಂಧ ಇಲ್ಲದೇ ಇರುವ ವಿಚಾರಗಳಲ್ಲೂ ಮೂಗು ತೂರಿಸುತ್ತಾ ಬೆಂಬಲಿಗರಷ್ಟೇ ಶತ್ರುಗಳನ್ನೂ ಸಂಪಾದನೆ ಮಾಡಿರುವ ನಟಿ ಅಂದ್ರೆ ಅದು ಬಾಲಿವುಡ್ ನ ಕ್ವೀನ್ ಕಂಗನಾ ರಣಾವತ್. ಕಂಗನಾ ಹೀಗೆಯೇ ಮಾತನಾಡಿ ಟ್ವಿಟ್ಟರ್ ನಿಂದ ಶಾಶ್ವತವಾಗಿ ಔಟ್ ಆಗಿದ್ದಾರೆ. ಅಲ್ಲದೇ ಕಂಗನಾ ಆಗಾಗ ಮೋದಿ ಸರ್ಕಾರ , ಬಿಜೆಪಿ ಸರ್ಕಾರದ ಪರವಾಗಿಯೇ ಹೇಳಿಕೆಗಳನ್ನ ನೀಡುತ್ತಾ ಸುದ್ದಿಯಾಗೋದು ಹೆಚ್ಚು. ಅಷ್ಟೇ ಅಲ್ದೇ ಕಂಗನಾ ಮುಂದೆ ಬಿಜೆಪಿಗೆ ಸೇರ್ಪಡೆಯಾಗಿ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ ಅನ್ನೋ ಚರ್ಚೆಗಳಿವೆ.
ಸದ್ಯಕ್ಕೆ ಕಂಗನಾ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಯೋಜನೆಗೆ ಕಂಗನಾ ರಾಯಭಾರಿಯಾಗಿದ್ದಾರೆ. ಹೌದು ಉತ್ತರ ಪ್ರದೇಶ ಸರ್ಕಾರದ ಒಂದು ಜಿಲ್ಲೆ-ಒಂದು ಉತ್ಪನ್ನ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ಕಂಗನಾ ರಣಾವತ್ ಅವರ ಹೆಸರನ್ನು ಸರ್ಕಾರ ಘೋಷಣೆ ಮಾಡಿದೆ. ಶುಕ್ರವಾರ ನಟಿ ಕಂಗನಾ ರಣಾವತ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನೆಗೆ ಭೇಟಿ ನೀಡಿದ್ದರು. ಇದಾದ ನಂತರ ಸರ್ಕಾರ ಈ ಘೋಷಣೆ ಮಾಡಿದೆ.
ಒಂದೇ ತಿಂಗಳಲ್ಲಿ 20 ಲಕ್ಷ ಭಾರತೀಯರ ಖಾತೆಗಳನ್ನು ಸ್ಥಗಿತಗೊಳಿಸಿದ ವಾಟ್ಸ್ ಆ್ಯಪ್..!
ಈ ಕುರಿತಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಟ್ವಿಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಖ್ಯಾತ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಭೇಟಿಯಾದರು. ಅವರಿಗೆ ಒಡಿಒಪಿ ಉತ್ಪನ್ನವನ್ನು ನೀಡಿದರು. ಕಂಗನಾ ಅವರು ಈಗ ನಮ್ಮ ಯೋಜನೆಯಾದ ಒಡಿಒಪಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದ 75 ಜಿಲ್ಲೆಗಳಾದ್ಯಂತ ಉತ್ಪನ್ನ – ನಿರ್ದಿಷ್ಟ ಸಂಪ್ರದಾಯಿಕ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರ ಒಂದು ಜಿಲ್ಲೆ-ಒಂದು ಉತ್ಪನ್ನ ಕಾರ್ಯಕ್ರಮವನ್ನು ಆರಂಭಿಸಿದೆ.