ಒಂದೇ ಒಂದು ಗಂಟೆಯಲ್ಲಿ ಇಂಡೋ-ಪಾಕ್ ಮ್ಯಾಚ್ ಟಿಕೆಟ್ ಸೋಲ್ಡ್ ಔಟ್
ಅಕ್ಟೋಬರ್ 24ರಂದು ನಡೆಯಲಿದೆ ಕಡುವೈರಿಗಳ ಮಹಾಯುದ್ಧ
ಅಕ್ಟೋಬರ್ 17ರಿಂದ ಚುಟುಕು ವಿಶ್ವಕಪ್ ಆರಂಭ
ಐಪಿಎಲ್ ಪಂದ್ಯಗಳು ರೋಚಕತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿವೆ. ಈ ಮಧ್ಯೆ ಟಿ20 ವಿಶ್ವಕಪ್ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ಯುಎಇ ಮತ್ತು ಒಮನ್ ದೇಶಗಳು ಆತಿಥ್ಯ ನೀಡಲಿವೆ. ಚುಟುಕು ವಿಶ್ವಕಪ್ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಚುಟುಕು ವಿಶ್ವಕಪ್ ಪಂದ್ಯವನ್ನು ಮೈದಾನದಲ್ಲೇ ವೀಕ್ಷಿಸಲು ಎರಡು ದೇಶಗಳ ಸರ್ಕಾರಗಳು ಅನುಮತಿ ನೀಡಿವೆ. ಮೈದಾನದ ಸಾಮರ್ಥ್ಯದ ಶೇಕಡಾ 70 ರಷ್ಟು ಜನರಿಗೆ ವೀಕ್ಷಣೆ ಮಾಡಲು ಅವಕಾಶವಿದೆ. ಐಸಿಸಿ ಈಗಾಗಲೇ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಕೂಡ ಆರಂಭಿಸಿದೆ. ಆನ್ಲೈನ್ ಟಿಕೆಟ್ಗಳು ಮಾರಾಟವಾಗುತ್ತಿವೆ.
ವಿಶ್ವಕಪ್ ಇರಲಿ, ಅಥವಾ ಬೇರೆ ಯಾವುದೇ ಪಂದ್ಯ ಇರಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತದೆ. ಟಿ20 ವಿಶ್ವಕಪ್ನಲ್ಲಿ ಇಂಡೋ-ಪಾಕಿಸ್ತಾನ ಮ್ಯಾಚ್ ಅಕ್ಟೋಬರ್ 24ರಂದು ನಡೆಯಲಿದೆ. ಅಚ್ಚರಿ ಅಂದ್ರೆ ಟಿಕೆಟ್ ಮಾರಾಟ ಆರಂಭಿಸಿದ ಒಂದೇ ಒಂದು ಗಂಟೆಯಲ್ಲಿ ಈ ಪಂದ್ಯದ ಟಿಕೆಟ್ ಸೋಲ್ಡ್ಔಟ್ ಆಗಿದೆ. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಜನರಲ್, ಜನರಲ್ ಈಸ್ಟ್, ಪ್ರೀಮಿಯಂ, ಪೆವಿಲಿಯನ್ ಈಸ್ಟ್ ಮತ್ತು ಪ್ಲಾಟಿನಂ ಸೇರಿದಂತೆ ಎಲ್ಲ ವಿಭಾಗದ ಟಿಕೆಟ್ಗಳು ಸೋಲ್ಡ್ ಆಗಿದ್ದು, ಯಾವುದೇ ಟಿಕೆಟ್ ವೆಬ್ಸೈಟ್ಗಳಲ್ಲಿ ಲಭ್ಯವಿಲ್ಲ. ಇದರ ಮಧ್ಯೆ ಅನೇಕರು ಟಿಕೆಟ್ ಖರೀದಿ ಮಾಡಲು ಸಾಧ್ಯವಾಗದೇ ನಿರಾಸೆಗೊಳಗಾಗಿದ್ದಾರೆ.









