ಟಯರ್ ಸ್ಫೋಟಗೊಂಡು ಕಾರಿನಲ್ಲಿಯೇ ತಾಯಿ – ಮಗ ಸಾವು
ಮಹಾಲಯ ಅಮವಾಸ್ಯೆ ದಿನವೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಯಿ ಮಗ ಅಪಘಾತ ಒಂದ್ರಲ್ಲಿ ದಾರುಣವಾಗಿ ಮೃರತಪಟ್ಟಿರುವ ಘಟನೆ ನಡೆದಿದೆ.
ಟಯರ್ ಸ್ಫೋಟಗೊಂಡು ತಾಯಿ, ಮಗ ಕಾರಿನಲ್ಲಿಯೇ ಸಾವನ್ನಪ್ಪಿದ್ದಾರೆ.
35 ವರ್ಷದ ಗುಣಲಕ್ಷ್ಮಿ ಹಾಗೂ 12 ವರ್ಷದ ದೈವಿಕ್ ಮೃತ ದುರ್ದೈವಿಗಳಾಗಿದ್ದಾರೆ.
ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಸುಮಾರು 4.30 ಕ್ಕೆ ಅಪಘಾತ ಸಂಭವಿಸಿದೆ.
ಕಾರಿನಲ್ಲಿ ಪತಿ ಜಗದೀಶ್ ಜೊತೆಗೆ ಗುಣಲಕ್ಷ್ಮಿ ಮತ್ತು ಮಗ ದೈವಿಕ್ ಹೋಗುತ್ತಿದ್ದಾಗ ಏಕಾಏಕಿ ಟೈಯರ್ ಗಳು ಸ್ಫೋಟ ಆಗಿದೆ.
ಈ ಪರಿಣಾಮ ಕಾರು ಕಂಬಕ್ಕೆ ಗುದ್ದಿದೆ. ಕಾರು ಓಡಿಸುತ್ತಿದ್ದ ಜಗದೀಶ್ ಗೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುರಾದೃಷ್ಟವಶಾತ್ ತಾಯಿ ಮಗ ಮೃತಪಟ್ಟಿದ್ದಾರೆ. ಈ ಸಂಬಂಧ ಮೈಸೂರಿನ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.








