ಟೀಮ್ ಇಂಡಿಯಾದ ಬೌಲರ್ ಜಹೀರ್ ಖಾನ್ ಗೆ ಹುಟ್ಟುಹಬ್ಬದ ಸಂಭ್ರಮ..!
ಜಹೀರ್ ಖಾನ್ 2000ನೇ ಇಸವಿಯಲ್ಲಿ ಕೀನ್ಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೂರು ಮೇಡನ್ ಓವರ್ ಸಹಿತ 2 ವಿಕೆಟ್ ಕಬಳಿಸಿ ಮಿಂಚಿದ್ದರು. 2003ರಿಂದ 2011ರವರೆಗೂ 3 ವಿಶ್ವಕಪ್ ಟೂರ್ನಿಯಲ್ಲೂ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ. ಜಹೀರ್ ಖಾನ್ ಭಾರತ ಪರ 92 ಟೆಸ್ಟ್ 200 ಏಕದಿನ ಪಂದ್ಯಗಳನ್ನಾಡಿದ್ದು ಕ್ರಮವಾಗಿ 311 ಹಾಗೂ 282 ವಿಕೆಟ್ ಕಬಳಿಸಿದ್ದಾರೆ. 2014ರಲ್ಲಿ ವೆಲ್ಲಿಂಗ್ಟನ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಹೀರ್ ಖಾನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು.
https://twitter.com/IndiaTVSports/status/1445818990522109954
https://mobile.twitter.com/imzaheer/with_replies
https://twitter.com/i/status/1430909312352849920
https://twitter.com/CricketNDTV/status/1445658762606305282








