ಉಚಿತ ಕೊರೊನಾ ಲಸಿಕೆ ನೀಡಿದ್ದೇ ಪೆಟ್ರೋಲ್ ಬೆಲೆ ಹೆಚ್ಚಳಕ್ಕೆ ಕಾರಣ ಎಂದ ಕೇಂದ್ರ ಸಚಿವ..!
ದಿನೇ ದಿನೇ ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗುತ್ತಲೇ ಇದ್ದು ವಾಹನ ಸವಾರರ ಕಣ್ಣು ಕೆಂಪಗಾಗಿಸಿದೆ. ಆದ್ರೂ ತೈಲ ಬೆಲೆ ಏರಿಕೆಯ ಪರ್ವ ಮುಂದುವರೆದಿದ್ದು, ಮಹಾನಗರಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಸರ್ವಕಾಲೀನ ದಾಖಲೆ ಬರೆದಿದೆ. ಆದ್ರೆ ಈ ಬಗ್ಗೆ ಕೆಲ ರಾಜಕೀಯ ನಾಯಕರು ಉಡಾಫೆ ಉತ್ತರಗಳನ್ನ ನೀಡ್ತಿದ್ದಾರೆ. ಇದೀಗ ಈ ಮಾತನಾಡಿರೋ ಕೇಂದ್ರ ಸಚಿವ ರಾಮೇಶ್ವರಂ ತೇಲಿ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತಿರುವ ಕಾರಣದಿಂದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ವಿದ್ಯುತ್ ವ್ಯತ್ಯಯ ಸಮಸ್ಯೆಗೆ ತಡೆಗೆ ಕೇಂದ್ರದಿಂದ ಮಹತ್ವದ ಕ್ರಮ
ಹೌದು ಪೆಟ್ರೋಲ್ ದುಬಾರಿಯಲ್ಲ. ಕೇಂದ್ರ ಮತ್ತು ರಾಜ್ಯಗಳು ವಿಧಿಸುತ್ತಿರುವ ತೆರಿಗೆಯಿಂದಾಗಿ ದುಬಾರಿಯಾಗುತ್ತಿದೆ. ನೀವೆಲ್ಲರೂ ಉಚಿತವಾಗಿ ಕೊರೊನಾ ಲಸಿಕೆ ಪಡೆದಿದ್ದೀರಿ. ಅದನ್ನು ಪೂರೈಸಲು ಹಣ ಎಲ್ಲಿಂದ ಬಂದಿದೆ. ದೇಶದ 130 ಕೋಟಿ ಜನರಿಗೆ ಉಚಿತವಾಗಿ 2 ಡೋಸ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಡೋಸ್ ಲಸಿಕೆಗೆ 1,200 ರೂ. ವೆಚ್ಚವಾಗುತ್ತದೆ. ಇದು ಸರ್ಕಾರಕ್ಕೆ ಹೊರೆಯಾಗಲಿದೆ. ಲಸಿಕೆ ಹಣವನ್ನು ಪೆಟ್ರೋಲ್ ತೆರಿಗೆ ಮೂಲಕವಾಗಿ ಪಡೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.








