100 ಕೋಟಿ ವ್ಯಾಕ್ಸಿನೇಷನ್ –ಇದು ಕೇವಲ ಸಂಖ್ಯೆಯಲ್ಲ ಇತಿಹಾಸ
ಕರೋನಾಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾರತ ನೂರು ಕೋಟಿ ದಾಟಿರುವ ಪ್ರಯುಕ್ತ ಪ್ರಧಾನಿ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು… ಭಾರತ ಅತಿ ಹೆಚ್ಚು ಲಸಿಕೆ ನೀಡಿದ ದೇಶಗಳಲ್ಲಿ ಎರಡನೇ ಸ್ಥಾನವನ್ನ ತಲುಪಿದೆ…ಇದು ಪ್ರತಿಯೊಬ್ಬ ಬಾರತೀಯನ ಯಶಸ್ಸು ಎಂದು ಮೋದಿ ಬಣ್ಣಿಸಿದರು
ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನ ಉದ್ದೇಶಿಸಿ ಮಾತನಾಡಿದ ಅವರು ಇಂದು ಭಾರತದ ಸಾಮರ್ಥ್ಯ ಪ್ರಪಂಚದ ಎದುರು ಅನಾವರಣಗೊಂಡಿದೆ… ಕಠಿಣ ಗುರಿಯನ್ನ ಇಟ್ಟುಕೊಂಡು ನಾವು ಸಾಧನೆ ಮಾಡಿದ್ದೇವೇ. ಇಡೀ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ. ಬಡವರು ಶ್ರೀಮಂತರು ಎನ್ನುವ ಭೇದ ಮಾಡದೇ ಎಲ್ಲರಿಗೂ ಲಸಿಕೆ ನೀಡುವ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರ ಎಲ್ಲರಿಗೂ ಮಾದರಿಯಾಗಿದೆ.
ಭಾರತ ಇಷ್ಟು ಜನರಿಗೆ ಲಸಿಕೆ ನೀಡಲು ಸಾಧ್ಯವಾ ಎಂದು ಎಲ್ಲರೂ ಅನುಮಾನದಿಂದ ನೋಡುತ್ತಿದ್ದರು..100 ಕೋಟಿ ವ್ಯಾಕ್ಸಿನ್ ನೀಡಿರುವುದು ಅದಕ್ಕೆಲ್ಲ ಉತ್ತರವಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಜನ ಬರುವುದಿಲ್ಲ ಎಂಬ ಮಾತು ಇತ್ತು. ಆದರೆ 100 ಕೋಟಿ ಲಸಿಕೆ ವಿತರಿಸುವ ಮೂಲಕ ಜನ ಉತ್ತರ ನೀಡಿದ್ದಾರೆ. ಜನರ ಸಹಭಾಗಿತ್ವದಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ದೀಪ ಬೆಳಗುವುದರಿಂದ ಘಂಟೆ ಬಾರಿಸುವುದರಿಂದ ಕೊರೊನಾ ಹೋಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಆದರೆ ಇದು ಜನ ಜಾಗೃತಿ ಮೂಡಿಸಿತು.
ಕರೋನಾ ನಂತರ ಆರ್ಥಿಕವಾಗಿ ಭಾರತ ಚೇತರಿಸಿಕೊಳ್ಳುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.. ಕರೋನಾ ಕಾಲದಲ್ಲಿ ಕೃಷಿ ನಮ್ಮ ಪ್ರಮುಖ ಆರ್ಥಿಕ ಕ್ಷೇತ್ರವಾಗಿತ್ತು.. ಈಗ ಎಲ್ಲ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾವಣೆಯಾಗುತ್ತಿದೆ ಎಂದು ಮೋದಿ ತಿಳಿಸಿದರು. ಕೊನೆಯಲ್ಲಿ ಯಾರು ಇದುವರೆಗೆ ಲಸಿಕೆ ಪಡೆದುಕೊಂಡಿಲ್ಲ, ಅವರು ಆದಷ್ಟು ಬೇಗ ತೆಗೆದುಕೊಳ್ಳಿ ಎಂದು ಕೋರಿಕೊಂಡರು…