ಹೊಸ ಕೋವಿಡ್ ವೇರಿಯಂಟ್ ಗೆ ಬೆಚ್ಚಿ ಬಿದ್ದ ಚೀನಾ
ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕರೋನ ರೋಗಕ್ಕೆ ಲಸಿಕೆ ನೀಡುತ್ತಾ ಕೋವಿಡ್ ನಿರ್ಭಂದಗಳನ್ನ ಸಡಿಲಿಸುತ್ತ ಬರುತ್ತಿವೆ..ಆದ್ರೆ ಕರೋನಾ ಜನಕ ಚೀನಾ ಮಾತ್ರ ಇದಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದೆ.
ಚೀನಾದ ಬೀಜಿಂಗ್ನಲ್ಲಿ ಈಗ ಕರೋನಾದ ಹೊಸ ವೇರಿಯಂಟ್ ಸೃಷ್ಟಿಯಾಗಿದ್ದು ಅಲ್ಲಿನ ಜನತೆಗೆ ಆತಂಕ ಸೃಷ್ಠಿಯಾಗಿದೆ..ವಿಮಾನ ನಿಲ್ದಾಣಗಳು, ಶಾಲಾ ಕಾಲೇಜುಗಳು, ಸೇರಿದಂತೆ ಮಾಲ್ ಗಳನ್ನ ಬಂದ್ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದ್ದಾರೆ.
ಉತ್ತರ ಮತ್ತು ವಾಯುವ್ಯ ಚೀನಾ ಪ್ರದೇಶಗಳಲ್ಲಿ ಕರೋನಾ ಮತ್ತೊಮ್ಮೆ ಹರಡುತ್ತಿದೆ.. ಸ್ಥಳಿಯವಾಗಿ ಸತತ ಐದು ದಿನಗಳ ಕಾಲ ಕೋವಿಡ್ ಕೇಸ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.
ಸಧ್ಯ ಎಲ್ಲ ಪ್ರವಾಸಿಗರ ಮತ್ತು ಸ್ಥಳಿಯ ಜನತೆಗೆ ಕೋವಿಡ್ ಟೆಸ್ಟೆ ಮಾಡಲಾಗುತ್ತಿದ್ದು..ವರದಿಯ ನಂತರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ.