ಪ್ರೀತಿ ನಿರಾಕರಿಸಿದ ಯುವತಿಯನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ
ಬೆಂಗಳೂರು : ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನ ಕೊಲೆಗೈದು ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ಲಿಂಗಧೀರ ಮಲ್ಲಸಂದ್ರದಲ್ಲಿ ನಡೆದಿದೆ. ಈತ ಯುವತಿಯೊಬ್ಬಳನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದ್ರೆ ಆಕೆ ಈತನ ಪ್ರೇಮ ನಿವೇದನೆಯನ್ನ ತಿರಸ್ಕರಿದ್ರಿಂದ ಕೊಲೆ ಮಾಡಿ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಮಿಳುನಾಡು ಮೂಲದ (30) ಗೋಪಾಲಕೃಷ್ಣ ಎಂಬ ಪಾಗಲ್ ಪ್ರೇಮಿ 25 ವರ್ಷದ ಅಂಕೋಲ ಮೂಲದ (25)ಉಷಾ ಎಂಬುವ ಯುವತಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಗೆದ್ದಲಾಪುರ ಬಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನುಗೊಂಡನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಉಷಾ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಬೇರೊಂದು ಖಾಸಗಿ ಕಂಪನಿಯಲ್ಲಿ ಗೋಪಾಲಕೃಷ್ಣ ಕೂಡ ಕೆಲಸ ಮಾಡುತ್ತಿದ್ದ. ಹಲವು ದಿನದಿಂದ ಉಷಾಳನ್ನು ಗೋಪಾಲಕೃಷ್ಣ ಪ್ರೀತಿಸುತ್ತಿದ್ದ. ಆದ್ರೆ ಉಷಾ ಆತನ ಪ್ರೇಮ ನಿವೇದನೆಯನ್ನ ತಿರಸ್ಕಾರಿದ್ದಾಳೆ. ಹೀಗಾಗಿ ಆಕೆಯನ್ನ ಕೊಲೆ ಮಾಡಿ ತಾನೂ ಸಾಯುವ ನಿರ್ಧಾರಕ್ಕೆ ಬಂದಿದ್ದಾನೆ.