ಸ್ಕಾಟ್ಲ್ಯಾಂಡ್ ವಿರುದ್ದ ಕ್ರೀಡಾಸ್ಪೂರ್ತಿ ಮೆರೆದ ಭಾರತ ತಂಡ
ಕ್ರೀಡಾಸ್ಫೂರ್ತಿ ಮೆರೆಯುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಎದುರಾಳಿ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಕಿರಿಯರಿಗೆ ಸಲಹೆ ನೀಡುತ್ತಾರೆ.
ಇದೇ ರೀತಿ ನಿನ್ನೆ ಕ್ರಿಕೆಟ್ ಶಿಶು ಸ್ಕಾಟ್ಲ್ಯಾಂಡ್ ಮೇಲೆ ಪಂದ್ಯ ಮುಗಿತ ನಂತರ ಸ್ಕಾಂಟ್ಲೆಂಡ್ ಆಟಗಾರರ ಡ್ರೆಸಿಂಗ್ ರೂಮ್ ಗೆ ಹೋಗಿ ಮಾತನಾಡಿಸುವ ಮೂಲಕ ಟೀಮ್ ಇಂಡಿಯಾ ಕ್ರೀಡಾ ಸ್ಪೂರ್ತಿಯನ್ನ ಮೆರೆದಿದೆ. ನಂತರ ಡ್ರೆಸ್ಸಿಂಗ್ ರೂಂನಲ್ಲಿ ಕೊಹ್ಲಿ ಅವರೊಂದಿಗೆ ಕೆಲಕಾಲ ಹರಟೆ ಹೊಡೆದರು. ನಾಯಕನ ಜೊತೆಗೆ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವಾರು ಆಟಗಾರರು ಅವರೊಂದಿಗೆ ಮಾತನಾಡಿದರು.
ಕ್ರಿಕೆಟ್ ಸ್ಕಾಟ್ಲ್ಯಾಂಡ್ ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. “ನಮಗೆ ಸಮಯ ನೀಡಿದ ವಿರಾಟ್ ಕೊಹ್ಲಿ ಮತ್ತು ತಂಡದ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇವೆ ” ಎಂದು ಶೀರ್ಷಿಕೆ ನೀಡಿ ಟ್ವೀಟ್ ಮಾಡಿದೆ.
ಟೀಂ ಇಂಡಿಯಾ ವಿರುದ್ಧದ ಪಂದ್ಯದ ಮುನ್ನಾ ದಿನ ಸ್ಕಾಟ್ಲ್ಯಾಂಡ್ ತಂಡದ ನಾಯಕ ಕೈಲ್ ಕೊಯೆಟ್ಜರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ವಿರಾಟ್ ಕೊಹ್ಲಿ ತಮ್ಮ ಡ್ರೆಸ್ಸಿಂಗ್ ರೂಂಗೆ ಬಂದು ನಮ್ಮ ಜೊತೆ ಮಾತನಾಡಬೇಕು ಎಂದು ಬಯಸಿದ್ದರು .ಟಾಸ್ ಸಮಯದಲ್ಲಿ ಕೊಹ್ಲಿ ಜೊತೆ ನಿಲ್ಲುವುದು ತುಂಬಾ ಒಳ್ಳೆಯದು ಎಂದ ಅವರು, ಕೊಹ್ಲಿಯ ಮಾತುಗಳು ತಮ್ಮ ಆಟಗಾರರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಕೈಲ್ ಮನವಿ ಹಿನ್ನೆಲೆಯಲ್ಲಿ ಕೊಹ್ಲಿ ಸ್ಕಾಟ್ಲ್ಯಾಂಡ್ ಆಟಗಾರರ ಜತೆಗಿರುವುದು. ಸಮಯವನ್ನ ಕಳೆದು ಕೆಲವೊಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧದ ಬೃಹತ್ ಗೆಲುವಿನೊಂದಿಗೆ ಟೀಂ ಇಂಡಿಯಾದ ಸೆಮಿಸ್ ಅವಕಾಶ ಸ್ವಲ್ಪ ಸುಧಾರಿಸಿದೆ.
MUST WATCH: #SpiritOfCricket was at its best as Scotland expressed their wish to visit the #TeamIndia dressing room & our boys made them feel at home🤝👌👌 – By @Moulinparikh
Special feature 🎥 🔽 #T20WorldCup #INDvSCO https://t.co/pfY3r9evwH pic.twitter.com/g6g6A86zve
— BCCI (@BCCI) November 6, 2021








