ಎಂ ಪಿ ರೇಣುಕಾಚಾರ್ಯ ಕುಟುಂಬದಿಂದ ಮರೊಣೋತ್ತರ ನೇತ್ರದಾನ
ನಟ ಪುನೀತ್ ರಾಜ್ ಕುಮಾರ ಅವರ ಸಮಾಧಿಗೆ ಬೇಟಿ ನೀಡಿದ ಹೊನ್ನಾಳ್ಳಿ ಶಾಸಕ ಪಿ ರೇಣುಕಾಚಾರ್ಯ ಅವರ ಕುಟುಂಬ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿತು. ನಂತರ ಮಾತನಾಡಿದ ರೇಣುಕಾಚಾರ್ಯ “ನಾನು ಮತ್ತು ನನ್ನ ಕುಟುಂಬ ಪುನೀತ್ ಅವರಂತೆ ಮರಣೋತ್ತರವಾಗಿ ಕಣ್ಣುಗಳನ್ನ ದಾನಮಾಡುತ್ತೆವೆ. ಮತ್ತು ಅವರು ಮಾಡುತ್ತಿದ್ದ ಹಲವು ಸಮಾಜಮುಖಿ ಕೆಲಸಗಳಿಗೆ ಹೆಗಲಾಗುತ್ತೆವೆ’’ ಎಂದು ಹೇಳಿದರು.
ಹೊನ್ನಳ್ಳಿ ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಪುನೀತ್ ನಮನ ಸಂಗೀತ ಕಾರ್ಯ ಕ್ರಮವನ್ನ ಹಮ್ಮಿಕೊಳ್ಳಲಾಗಿದ್ದು ಅಲ್ಲಿ ಅಧಿಕೃತವಾಗಿ ನೇತ್ರಾ ದಾನ ಮಾಡಲು ಹೆಸರು ನೊಂದಾಯಿಸಿಕೊಳ್ಳಲಿದ್ದಾರೆ. ಜೊತೆಗೆ ಪುನೀತ್ ರಾಜ ಕುಮಾರ್ ಅವರ ನೂರಾರು ಅಭಿಮಾನಿಗಳು ಸಹ ಹೆಸರು ನೊಂದಾಯಿಸಿಕೊಳ್ಳಲಿದ್ದಾರೆ.