ಮುಜಾಫರ್ ಪುರ: ಬಿಹಾರದ ಮುಜಾಫರ್ ಪುರದಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ 11 ಮಂದಿ ಸ್ಥಳದಲ್ಲೇ ಮೃತಪಟ್ಟು, 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಜಾಫರ್ ಪುರದ ಕಂಟಿ ಪೊಲೀಸ್ ಠಾಣಾ ಏರಿಯಾದ ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 11 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!
ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು...








