ಮಂಗಳೂರು ನರ್ಸಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್ – 11 ವಿದ್ಯಾರ್ಥಿಗಳ ಬಂಧನ
ಉಳ್ಳಾಲ, ಫೆಬ್ರವರಿ12: ಕಿರಿಯ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡಿದ್ದಕ್ಕಾಗಿ ನಗರದ ನರ್ಸಿಂಗ್ ಕಾಲೇಜಿನ 11 ವಿದ್ಯಾರ್ಥಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಹಮ್ಮದ್ ಶಮ್ಮಾಸ್, ಆಲ್ವಿನ್ ಜಾಯ್, ರಾಬಿನ್ ಬಿಜು, ಜೆರಾನ್ ಸಿರಿಲ್, ಜಬಿನ್ ಮಹ್ರೂಫ್, ಮಹಮ್ಮದ್ ಸೂರಜ್, ಜಾಫಿನ್ ರಾಯ್ಚನ್, ಅಬ್ದುಲ್ ಬಸಿತ್, ಅಶಿನ್ ಬಾಬು, ಅಬ್ದುಲ್ ಅನಸ್ ಮುಹಮ್ಮದ್, ಮತ್ತು ಅಕ್ಷಯ್ ಕೆ.ಎಸ್ ಎಂದು ಗುರುತಿಸಲಾಗಿದೆ.
ಕಾಲೇಜಿನ ಕೆಲವು ವಿದ್ಯಾರ್ಥಿಗಳು ನೀಡಿದ ದೂರಿನ ಆಧಾರದ ಮೇಲೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದೇರಲಕಟ್ಟೆಯಲ್ಲಿನ ನರ್ಸಿಂಗ್ ಮತ್ತು ಫಿಸಿಯೋಥೆರಪಿ ವಿದ್ಯಾರ್ಥಿಗಳ ಹಾಸ್ಟೆಲ್ನಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿದೆ. ಮೂರನೇ ವರ್ಷದ ನರ್ಸಿಂಗ್ ವಿಭಾಗದ 11 ವಿದ್ಯಾರ್ಥಿಗಳು ಕೇರಳ ಮೂಲದ ಪ್ರಥಮ ವರ್ಷದ ಫಿಸಿಯೋಥೆರಪಿಯ 5 ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಾರೆ.
ಮೂಲಗಳ ಪ್ರಕಾರ, ಅವರು ಹಿರಿಯ ವಿದ್ಯಾರ್ಥಿಗಳು ಏನು ಹೇಳಿದರೂ ಅದನ್ನು ಗೌರವಿಸಿ ಪಾಲಿಸಬೇಕೆಂದು ಸೂಚಿಸಿದ್ದಾರೆ.
ಉಳ್ಳಾಲ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ನೀವು ಕಾರಣವಿಲ್ಲದೆ ಅತಿಯಾಗಿ ಬೆವರುತ್ತಿದ್ದರೆ, ಈ ಮಾಹಿತಿ ನಿಮಗಾಗಿ.. https://t.co/Vq1geJbtMt
— Saaksha TV (@SaakshaTv) February 7, 2021
ಮಾರಕ ಆಯುಧಗಳನ್ನು ತಯಾರಿಸಲು ಹೆಸರುವಾಸಿಯಾದ ಭಾರತದ ಕಂಪನಿಗಳು https://t.co/EWmBLtbXj5
— Saaksha TV (@SaakshaTv) February 6, 2021