ಛೇ.. ಇದೆಂಥಾ ಭಕ್ತಿ : ಅಡಿಪಾಯಕ್ಕೆ 11 ಸಾವಿರ ಲೀಟರ್ ಹಾಲು, ಮೊಸರು, ತುಪ್ಪ
ಜೈಪುರ : ದೇವಾಲಯದ ನಿರ್ಮಾಣಕ್ಕಾಗಿ ತೆಗೆದ ಅಡಿಪಾಯದ ಗುಂಡಿಗೆ ಭಕ್ತರು 11 ಸಾವಿರ ಲೀಟರ್ ಹಾಲು, ಮೊಸರು ಮತ್ತು ಬೆಣ್ಣೆಯನ್ನು ಸುರಿದಿರುವ ಘಟನೆ ರಾಜಸ್ಥಾನದ ಜಲ್ವಾರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಜಲ್ವಾರ್ ಜಿಲ್ಲೆಯ ರತ್ಲೈನಲ್ಲಿ ದೇವ್ ನಾರಾಯಣ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಅಡಿಪಾಯದ ಗುಂಡಿಯನ್ನು ತೆಗೆಯಲಾಯಿತು.
ಶನಿವಾರ ನಡೆದ ಶಂಕುಸ್ಥಾಪನೆ ಸಮಾರಂಭಕ್ಕಾಗಿ 11 ಸಾವಿರ ಲೀಟರ್ ಹಾಲು, ಮೊಸರು, ತುಪ್ಪ ಸಂಗ್ರಹಿಸಲಾಗಿದ್ದು, ಆನಂತರ ಅವುಗಳನ್ನ ತಳಪಾಯದ ಗುಂಡಿಯಲ್ಲಿ ಸುರಿಯಲಾಗಿದೆ.
ಇನ್ನ ಮಂದಿರ ನಿರ್ಮಾಣ ಸಮಿತಿಯ ವಕ್ತಾರ ರಾಮಲಾಲ್ ಮಾಧ್ಯಮದ ಜೊತೆ ಮಾತನಾಡುತ್ತಾ, ಶಂಕುಸ್ಥಾಪನೆಗಾಗಿ ಗುಜ್ಜಾರ್ ಮತ್ತು ಇತರ ಜಾತಿಯವರು 11 ಸಾವಿರ ಲೀಟರ್ ಹಾಲು, ಮೊಸರು ಮತ್ತು ತುಪ್ಪವನ್ನು ನೀಡಿವೆ.
ಇದರ ಮೌಲ್ಯ 1.5 ಲಕ್ಷ ರೂ. ಕಾರ್ಯಕ್ರಮಕ್ಕೂ ಒಂದು ದಿನ ಮೊದಲು ಅವರನ್ನು ಕೇಳಿದ್ದೆವು. ಇದನ್ನು ಮಾಡುವುದು ಸಂಪ್ರದಾಯವಲ್ಲ, ಆದರೆ ಅದನ್ನು ಭಕ್ತಿಯಿಂದ ತಂದು ಕೊಟ್ಟಿರುತ್ತಾರೆ.
ದೇವರು ನಮಗೆ ನೀಡುವುದಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ. ಇದು ಆಹಾರ ವ್ಯರ್ಥ ಮಾಡುವುದಲ್ಲ. ಭಗವಂತ ದೇವ್ ನಾರಾಯಣ್ ನಮ್ಮವರನ್ನು ರಕ್ಷಿಸಿದ್ದಾನೆ. ಸುಮಾರು ಒಂದು ಕೋಟಿ ರೂಪಾಯಿವೆಚ್ಚದಲ್ಲಿ ಈ ದೇವಾಲಯ ವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಕೊರೊನಾ ಸಂಕಷ್ಟದಿಂದ ಅದೆಷ್ಟೋ ಮಂದಿ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಹಾಲು, ಮೊಸರನ್ನು ವೇಸ್ಟ್ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel