ಹಾಸನದಲ್ಲಿ ಪುನೀತ್ ಅಭಿಮಾನಿ ಆತ್ಮಹತ್ಯೆ, ನಿಲ್ಲುತ್ತಿಲ್ಲ ಅಭಿಮಾನಿಗಳ ದುಖಃ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನುವುದನ್ನ ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಪುನೀತ್ ಸಾವಿನ ನಂತರ ತಮ್ಮ ಜೀವನವನ್ನ ಕೊನೆಗೊಳಿಸಿಕೊಳ್ಳುವ ಅಭಿಮಾನಿಗಳ ಸಂಖ್ಯೆ ಇನ್ನೂ ನಿಲ್ಲುತ್ತಿಲ್ಲ.
ಹಾಸನದ ರಾಜ್ ಕುಮಾರ್ ನಗರದ ನಿವಾಸಿಯಾಗಿರು 34 ವರ್ಷದ ಮಯೂರ ನಾಗರಾಜ್ ಅವರು ಪುನೀತ್ ಸಾವಿಗೆ ಮನನೊಂದು ನೇಣಿಗೆ ಶರಣಾಗಿದ್ದಾರೆ. ಮಯೂರ ನಾಗರಾಜ್ ಅವರು ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪುನೀತ್ ಸಾವಿನ ನಂತರ ತೀವ್ರ ಖಿನ್ನತೆ ಒಳಗಾಗಿದ್ದರು. ಕೆಲ ದಿನಗಳಿಂದ ಊಟ ತಿಂಡಿಯನ್ನೂ ಬಿಟ್ಟಿದ್ದರು.
ಮನೆಯಲ್ಲಿ ಪತ್ನಿ ಮತ್ತು ಅಮ್ಮ ಇದ್ದಾಗಲೆ ರೂಮ್ ಗೆ ಹೋಗಿ ಕೊಠಡಿ ಬಾಗಿಲು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣವೆ ಅವರನ್ನ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದರು , ಅಷ್ಟರಲ್ಲಾಗಲೆ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದರು. ನಗರದ ಪೆನ್ಸನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








