ಯಲಹಂಕ ಶಾಸಕರ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್
ಬಿಜೆಪಿ ಶಾಸಕರ ಹತ್ಯೆಗೆ ಸಂಚು ಆರೋಪ ಹಿನ್ನಲೆಯಲ್ಲಿ ರೌಡಿ ಶೀಟರ್ ಸೇರಿ ಕಾಂಗ್ರೆಸ್ ಮುಖಂಡನನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆಯ ಬಗ್ಗೆ ಮಾತನಾಡಿದ್ದರೆಂಬ ಕಾರಣಕ್ಕೆ ಕಾಂಗ್ರೇಸ್ ಮುಖಂಡ ಎಂ ಎನ್ ಗೋಪಾಲಕೃಷ್ಣ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಎಸ್ ಆರ್ ವಿಶ್ವನಾಥ್ ಹತ್ಯೆಗೆ 5 ತಿಂಗಳ ಹಿಂದೆ ಸ್ಕೆಚ್ ಹಾಕಿದ್ದ ವಿಡಿಯೋ ಇದೀಗ ಬಹಿರಂಗವಾಗಿದೆ. ಕಾಂಗ್ರೇಸ್ ಮುಖಂಡ ಗೋಪಾಲಕೃಷ್ಣ ಮನೆಯಲ್ಲಿ ವಿಶ್ವನಾಥ್ ಹತ್ಯೆಕುರಿತಂತೆ ಮಾಡಲು ನಡೆಸಿದ್ದ ಮಾತುಕತೆ ವಿಡಿಯೋ ಬಹಿರಂಗವಾಗಿತ್ತು. ಈ ಹಿನ್ನಲೆ ನೆನ್ನೆ ತಡರಾತ್ರಿ ಕುಳ್ಳ ದೇವರಾಜ ಮತ್ತು ಗೋಪಾಲಕೃಷ್ಣರನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಾಂಗ್ರೇಸ್ ಮುಖಂಡ ಗೋಪಾಲ ಕೃಷ್ಣ ಅವರು ಯಲಹಂಕ ವಿಧಾನಸಭಾ ಎಲೆಕ್ಷನ್ ಅಲ್ಲಿ ಎರಡು ಭಾರಿ ಸೋತಿದ್ದರು. 5 ಕೋಟಿಗೆ ಡೀಲ್ ಮುಗಿಸಿ, ಆಂಧ್ರ ಶಾರ್ಪ್ ಶೂಟರ್ ಗಳನ್ನ ಕರೆಸಿ ಕೊಲೆ ಮಾಡುವಂತೆ ಮಾತನಾಡುವ ವಿಡಿಯೋವನ್ನ ಕುಳ್ಳ ದೇವರಾಜ್ ಎಂಬ ರೌಡಿ ಸ್ಟಿಂಗ್ ವಿಡಿಯೋ ಮಾಡಿದ್ದ.
ಸ್ಟಿಂಗ್ ನಲ್ಲಿ ವಿಶ್ವನಾಥ್ ವಿರುದ್ಧ ಸಹಜವಾಗಿ ಮಾತನಾಡಿದ್ದ ಗೋಪಾಲಕೃಷ್ಣನನ್ನ ಕುಳ್ಳ ದೇವರಾಜ ಬೇಕೆಂದೆ ವಿಶ್ವನಾಥ್ ವಿರುದ್ಧ ಎತ್ತಿ ಕಟ್ಟಿದ್ದ ವಿಡಿಯೋ ಪರಿಶೀಲನೆ ನಡೆಸಿದಾಗ ಪ್ರಚೋದನೆ ಮಾಡಿರೋದು ಬೆಳಕಿಗೆ ಬಂದಿದೆ. ಈ ಹಿನ್ನಲೆ ನೆನ್ನೆ ತಡರಾತ್ರಿ ಕುಳ್ಳ ದೇವರಾಜ ಮತ್ತು ಗೋಪಾಲಕೃಷ್ಣರನ್ನ ಕರೆ ತಂದಿದ್ದ ಸಿಸಿಬಿ ಅಧಿಕಾರಿಗಳು ಗೋಪಾಲಕೃಷ್ಣರನ್ನ ವಿಚಾರಣೆ ನಡೆಸಿ ಸಿಸಿಬಿ ಅಧಿಕಾರಿಗಳು ನಿನ್ನೆಯೇ ಬಿಟ್ಟು ಕಳಿಸಿದ್ದಾರೆ. ಸ್ಟಿಂಗ್ ಮಾಡಿದ್ದ ವಿಡಿಯೋವನ್ನ ಬಳಸಿ ಶಾಸಕ ವಿಶ್ವನಾಥ್ ಗೆ ಆಪ್ತನಾಗಲು ಬಯಸಿದ್ದ ಕುಳ್ಳ ದೇವರಾಜ್ ಡಬಲ್ ಗೇಮ್ ಆಡಲು ಹೋಗಿ ತಾನೆ ತಗಲಾಕಿಕೊಂಡಿದ್ದಾನೆ.