ಲಕ್ಷಾಂತರ ಫಾಲೋವರ್ಸ್ ಕಳೆದುಕೊಂಡ ಟ್ವಿಟ್ಟರ್ ಬಳಕೆದಾರರು
ಭಾರತದ ಸೆಲೆಬ್ರಿಟಿಗಳು ರಾತ್ರೋ ರಾತ್ರಿ ಲಕ್ಷಾಂತರ ಟ್ವೀಟರ್ ಫಾಲೋವರ್ಸ ಗಳನ್ನ ಕಳೆದುಕೊಂಡಿದ್ದಾರೆ. ಈ ವಿಷಯವಾಗಿ ಸೆಲೆಬ್ರಿಟಿಗಳು ನೂತನ ಟ್ವೀಟರ್ ಸಿಇಒ ಪರಾಗ್ ಅಗರವಾಲ್ ಮೇಲೆ ಪುಲ್ ಗರಂ ಆಗಿದ್ದಾರೆ. ಫೇಕ್ ಫಾಲೋವರ್ಸ್ ಗಳನ್ನ ತೆಗೆದುಹಾಕಲು ಟ್ವೀಟರ್ ಈ ಕ್ರಮ ಕೈಗೊಂಡಿದೆ.
ನರೇಂದ್ರ ಮೋದಿ ರಾಹುಲ್ ಗಾಂಧಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಹಿಂಬಾಲಕರು ದಿಢೀರ್ ಎಂದು ಕಡಿಮೆಯಾಗಿದ್ದಾರೆ. ಫೇಕ್ ಅಕೌಂಟಗಳನ್ನ ತೆಗೆದು ಹಾಕಲು ಪಾಸ್ವರ್ಡ್ ರೀ ಸೆಟ್ ಮತ್ತು ಮೊಬೈಲ್ ನಂಬರ್ ಅಪ್ಡೇಟ್ ಗಳನ್ನ ಟ್ವಿಟರ್ ಕೇಳ್ತಿದೆ ಇದರಿಂದ ಸಾಕಷ್ಟು ಫೇಕ್ ಅಕೌಂಟಗಳು ಡಿಲಿಟ್ ಆಗಿವೆ, ಈ ಬಗ್ಗೆ ಟೀಟರ್ ಯವುದೇ ರೀತಿಯ ಹೇಳಿಕೆಯನ್ನ ಬಿಡುಗಡೆ ಮಾಡಿಲ್ಲ.