ಬಿಪಿನ್ ರಾವತ್ ಗೆ ಅಗೌರವ – ಹಿಂದೂ ಧರ್ಮಕ್ಕೆ ಮತಾಂತರವಾದ ನಿರ್ದೇಶಕ
ಸೇನಾ ಪಡೆಗಳ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಾವನ್ನ ಸಂಭ್ರಮಿಸಿದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರಿದ್ದಾರೆ ಎನ್ನುವ ಕಾರಣಕ್ಕೆ ಕೇರಳದ ಪ್ರಖ್ಯಾತ ನಿರ್ದೇಶಕ ಹಿಂದೂ ಧರ್ಮಕ್ಕೆ ಮಂತಾಂತರವಾಗಿದ್ದಾರೆ. ಮಲಯಾಳಂನ ಖ್ಯಾತ ನಿರ್ದೇಶಕ ಆಲಿ ಅಕ್ಬರ್ ಅವರು ಪತ್ನಿ ಸಮೇತ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.
ಮಿಲಿಟರಿ ಅಧಿಕಾರ ಬಿಪಿನ್ ರಾವತ್ ಅವರ ಸಾವಿಗೆ ಅಗೌರವ ಸೂಚಿಸಿದ ದೇಶ ವಿರೋಧಿ ಮುಸ್ಲೀಂ ರ ಕೃತ್ಯವನ್ನ ಯಾವುದೇ ಮುಸ್ಲಿಂ ನಾಯಕರು ಖಂಡಿಸಿಲ್ಲ, ಹಾಗಾಗಿ ಈ ಧರ್ಮದಲ್ಲಿ ನನಗೆ ನಂಬಿಕೆ ಉಳಿದಿಲ್ಲ ಎಂದು ಆಲಿ ಅಕ್ಬರ್ ಅವರು ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ನನ್ನ ಜನ್ಮದಿಂದ ಬಂದ ಗುರುತನ್ನ ತೊರೆಯುತ್ತಿದ್ದೇನೆ. ನಾನು ಜನ್ಮದಿಂದ ಹಾಕಿದ್ದ ಉಡುಗೆಯನ್ನ ಬಿಚ್ಚಿ ಎಸೆಯುತ್ತಿದ್ದೇನೆ. ಇದರ ನಂತರ ನಾನು ಮುಸ್ಲಿಂನಾಗಿ ಇರೋದಿಲ್ಲ ನಾನು ಭಾರತೀಯ. ಜನರಲ್ ರಾವತ್ ಅವರ ಸಾವನ್ನ ಸಂಭ್ರಮಿಸುವುದರೊಂದಿಗೆ ಸಾಕಷ್ಟು ರಾಷ್ಟ್ರ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ನಾನು ನನ್ನ ಪತ್ನಿ ಹಿಂದು ಧರ್ಮಕ್ಕೆ ಮಂತಾಂತರ ಆಗಲಿದ್ದೇನೆ. ಅದಕ್ಕೆ ಕೆಲ ಪ್ರಕ್ರಿಯೆಗಳು ನಡೆಯಬೇಕಿವೆ. ನಾನು ನನ್ನ ಮಕ್ಕಳಿಗೆ ಒತ್ತಡ ಹೇರುವುದಿಲ್ಲ ಅವರಿಗೆ ತೋಚಿದ ಹಾಗೆ ನಿರ್ಧಾರ ತೆಗೆದುಕೊಳ್ಳಲಿ ಎಂದು ನಿರ್ದೇಶಕ ಆಲಿ ಅಕ್ಬರ್ ಹೇಳಿದ್ದಾರೆ.








