ಪ್ರಧಾನಿ ನರೇಂದ್ರ ಮೋದಿ ಸವಾರಿಗೆ ಸಿದ್ಧವಾದ ಹೊಸ ಕಾರು
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಗೆ ಹೊಸ ಮರ್ಸಿಡಿಸ್ ಕಾರು ಸೇರ್ಪಡೆಯಾಗಿದೆ. ಪ್ರಧಾನಿಯವರ ಸುರಕ್ಷತೆಗಾಗಿ ಈ ಹೊಸ ಕಾರನ್ನು ತರಲಾಗಿದೆ. Mercedes-Maybach S650 Guard ಮಾಡೆಲ್ ನ ಈ ಕಾರು ಅನೇಕ ಹೈಟೆಕ್ ಫೀಚರಸ್ ಹೊಂದಿದೆ,
ಬುಲೆಟ್ ಫ್ರೂಫ್ ಮತ್ತು ಬಾಂಬ್ ಸ್ಫೋಟಗಳಿಂದ ಸಹ ರಕ್ಷಣೆ ನೀಡುವ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಇತ್ತೀಚೆಗೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ಈ ಕಾರಿನಲ್ಲಿ ಕಾಣಿಸಿಕೊಂಡರು.
ಮೋದಿಯವರ ಈ ಹೊಸ ಕಾರಿನ ವಿಶೇಷತೆ ಏನು ಅಂತ ತಿಳಿಯೋಣ.
ಕಾರಿನ ಕಿಟಕಿ ಗಾಜು ಮತ್ತು ಬಾಡಿ ಶೆಲ್ ಎಷ್ಟು ಬಲಿಷ್ಠವಾಗಿದೆಯೆಂದರೆ ಎಕೆ-47 ನಂತಹ ಅಪಾಯಕಾರಿ ರೈಫಲ್ ಬುಲೆಟ್ಗಳು ಸಹ ತಡೆದು ನಿಲ್ಲಿಸುವ ಶಕ್ತಿ ಹೊಂದಿದೆ.
ಈ ಕಾರು ಸ್ಫೋಟಕ ನಿರೋಧಕ ವಾಹನ (ERV) 2010 ರೇಟಿಂಗ್ ಅನ್ನು ಪಡೆದುಕೊಂಡಿದೆ. ಅದರಲ್ಲಿ ವ್ಯಕ್ತಿ ಕುಳಿತಿರುವ ದೂರದಿಂದ ಕೇವಲ 2 ಮೀಟರ್ ಅಂತರದಲ್ಲಿ15 ಕೆಜಿಯಷ್ಟು TNT ಬಾಂಬ್ ಸ್ಫೋಟಿಸಿದರು ವ್ಯಕ್ತಿ ಸುರಕ್ಷಿತವಾಗಿಸಬಹುದು.
ಕಾರ್ ಕಿಟಕಿಗಳನ್ನು ಪಾಲಿಕಾರ್ಬೊನೇಟ್ನಿಂದ ಲೇಪಿಸಲಾಗಿದೆ. ಇದು ಭದ್ರತೆಯ ಮತ್ತೊಂದು ಪದರವನ್ನು ಒದಗಿಸುತ್ತದೆ. ಗ್ಯಾಸ್ ದಾಳಿಯ ಸಂದರ್ಭದಲ್ಲಿ ಕ್ಯಾಬಿನ್ ಪ್ರತ್ಯೇಕ ಗಾಳಿಯ ಪೂರೈಕೆಯನ್ನು ಸಹ ಪಡೆಯುತ್ತದೆ.
ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ನಲ್ಲಿ ವಿಶೇಷ ರನ್-ಫ್ಲಾಟ್ ಟೈರ್ಗಳಲ್ಲಿಯೂ ಸಹ ಚಲಿಸಬಹುದು. ದಾಳಿಯ ನಂತರ ಟೈರ್ಗಳಿಗೆ ಹಾನಿಯ ಸಂದರ್ಭದಲ್ಲಿಯೂ ಇದು ವೇಗವನ್ನು ಪಡೆದುಕೊಳ್ಳುತ್ತದೆ.
ಕಾರಿನ ಇಂಧನ ಟ್ಯಾಂಕ್ ಅನ್ನು ವಿಶೇಷ ಅಂಶದೊಂದಿಗೆ ಲೇಪಿಸಲಾಗಿದೆ, ಇದು ಬುಲೆಟ್ನಿಂದ ಉಂಟಾಗುವ ರಂಧ್ರವನ್ನು ಸ್ವಯಂಚಾಲಿತವಾಗಿ ಮುಚ್ಚುತ್ತದೆ. ಬೋಯಿಂಗ್ AH-64, ಅಪಾಚೆ ಟ್ಯಾಂಕ್ ದಾಳಿ ಹೆಲಿಕಾಪ್ಟರ್ಗಳಲ್ಲಿ ಬಳಸಿದ ಅದೇ ವಸ್ತುವಿನಿಂದ ಇದನ್ನು ತಯಾರಿಸಲಾಗುತ್ತದೆ.
Mercedes-Maybach S650 ಗಾರ್ಡ್ ಎಂಜಿನ್
ಎಂಜಿನ್: ಈ ಉನ್ನತ ಮಟ್ಟದ ಭದ್ರತಾ ಕಾರು 6.0-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್ನಿಂದ ಚಾಲಿತವಾಗಿದೆ. ಇದು 516bhp ಪವರ್ ಮತ್ತು 900Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರಿನ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ.
ಇಂಟೀರಿಯರ್: ಕಾರಿನೊಳಗೆ ಮಸಾಜ್ ಆಸನವನ್ನು ಒದಗಿಸಲಾಗಿದೆ, ಇದು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಆಯಾಸವನ್ನು ತೆಗೆದುಹಾಕುತ್ತದೆ. ಪ್ರಯಾಣಿಕರು ಅಗತ್ಯಕ್ಕೆ ಅನುಗುಣವಾಗಿ ಲೆಗ್ ರೂಂ ಅನ್ನು ಹೆಚ್ಚಿಸಬಹುದು. ಕಾರಿನ ಹಿಂದಿನ ಸೀಟಿನಲ್ಲೂ ಬದಲಾವಣೆ ಮಾಡಲಾಗಿದೆ.
Mercedes-Maybach S650 ಗಾರ್ಡ್ ಬೆಲೆ
Mercedes-Maybach S650 ಗಾರ್ಡ್ ಒಂದು ಫೇಸ್ಲಿಫ್ಟ್ ಮಾಡೆಲ್ ಆಗಿದ್ದು ಇದರ ಬೆಲೆ ಸುಮಾರು ರೂ.12 ಕೋಟಿ. ಯಾವುದೇ ಕಾರಿಗೆ ಹೋಲಿಸಿದರೆ ಇದು ಅತ್ಯಧಿಕ ಭದ್ರತಾ ಮಟ್ಟವನ್ನು ಹೊಂದಿದೆ. Mercedes-Maybach ಕಳೆದ ವರ್ಷ ಭಾರತದಲ್ಲಿ S600 ಗಾರ್ಡ್ ಅನ್ನು ರೂ 10.5 ಕೋಟಿಗೆ ಬಿಡುಗಡೆ ಮಾಡಿತು.
SPG, ಕಾರುಗಳ ಉನ್ನತೀಕರಣವನ್ನು ನಿರ್ಧರಿಸುತ್ತದೆ
ಹೊಸ ಕಾರಿನ ನವೀಕರಣವನ್ನು ಸಾಮಾನ್ಯವಾಗಿ ವಿಶೇಷ ರಕ್ಷಣಾ ಗುಂಪು (SPG) ಮೂಲಕ ಮಾಡಲಾಗುತ್ತದೆ, ಇದು ದೇಶದ ಪ್ರಧಾನಿ ಮತ್ತು ಅವರ ಕುಟುಂಬದ ಭದ್ರತೆಯನ್ನು ನೋಡಿಕೊಳ್ಳುತ್ತದೆ. ಸುರಕ್ಷತಾ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯದ ಮುಖ್ಯಸ್ಥರಿಗೆ ವಾಹನದ ನವೀಕರಣದ ಅಗತ್ಯವಿದೆಯೇ ಅಥವಾ ಬೇಡವೇ ಎಂಬುದನ್ನು SPG ನಿರ್ಧರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯ ವಾಹನಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ ಗೂ ಮೊದಲು ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಗಾಡಿಯನ್ನ ಬಳಸಲಾಗುತ್ತಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಅವರು ಬುಲೆಟ್ ಪ್ರೂಫ್ ಮಹೀಂದ್ರ ಸ್ಕಾರ್ಪಿಯೊದಲ್ಲಿ ಪ್ರಯಾಣಿಸುತ್ತಿದ್ದರು. 2014 ರಲ್ಲಿ ಪ್ರಧಾನಿಯಾದ ನಂತರ, ಅವರು BMW 7 ಸರಣಿಯ ಹೈ-ಸೆಕ್ಯುರಿಟಿ ಆವೃತ್ತಿಯನ್ನು ಬಳಸಿದರು. ಅದರ ನಂತರ, ಅವರ ಸುರಕ್ಷತೆಯ ದೃಷ್ಟಿಯಿಂದ ಕಾರನ್ನು ಕಾಲಕಾಲಕ್ಕೆ ನಿರಂತರವಾಗಿ ನವೀಕರಿಸಲಾಯಿತು.








