ಖ್ಯಾತ ಯುವ ಮಹಿಳಾ ಉದ್ಯಮಿ ಪಂಖೂರಿ ಶ್ರೀವಾಸ್ತವ ನಿಧನ…
ಸೋಶಿಯಲ್ ಕಮ್ಯೂನಿಟಿ ಫ್ಲಾಟ್ ಫಾರ್ಮ್ ‘ಪಂಖೂರಿ’ ಮತ್ತು ಮನೆ ಬಾಡಿಗೆ ಸ್ಟಾರ್ಟಪ್ ‘ಗ್ರಾಬ್‌ಹೌಸ್’ ನಂತಹ ಸ್ಟಾರ್ಟ್‌ಅಪ್‌ಗಳ ಸಂಸ್ಥಾಪಕಿ ಪಂಖೂರಿ ಶ್ರೀವಾಸ್ತವ ನಿಧನರಾಗಿದ್ದಾರೆ. 32 ವರ್ಷದ ಝಾನ್ಸಿ ಮೂಲದ ಕೋಟ್ಯಾಧಿಪತಿ ಉದ್ಯಮಿ ಮಹಿಳೆ ಪಂಖೂರಿ ಶ್ರೀವಾಸ್ತವ್ ಅವರ ಸಾವಿನ ಸುದ್ದಿಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ಪಂಖೂರಿ ಶ್ರೀವಾಸ್ತವ ಅವರು ಹೃದಯಾಘಾತದಿಂದ ನಿಧನರಾದರು. ನಮ್ಮ ಕಂಪನಿಯ ಸಿಇಒ ಪಂಖೂರಿ ಶ್ರೀವಾಸ್ತವ ಅವರು ಡಿಸೆಂಬರ್ 24 ರಂದು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ‘ಪಂಖೂರಿ’ ಅಧಿಕೃತ ಟ್ವಿಟರ್ ಹ್ಯಾಂಡಲ್ ಸಂತಾಪ ಸಂದೇಶವನ್ನು ನೀಡಿದೆ.
ಪಂಖ್ರಿ ಬೆಂಗಳೂರಿನಲ್ಲಿದ್ದರು ಎಂದು ತಂದೆ ಮತ್ತು ಕಿರಿಯ ಸಹೋದರ ಹೇಳಿದರು. ಅವರು ಡಿಸೆಂಬರ್ 24 ರಂದು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಮೃತದೇಹವನ್ನು ಝಾನ್ಸಿಗೆ ತರಲಾಗಿದ್ದು ಡಿಸೆಂಬರ್ 26 ರಂದು ಅಂತಿಮ ವಿಧಿವಿಧಾನಗಳನ್ನು ನಡೆಸಲಾಗಿದೆ.
ಪಂಖೂರಿ ಅವರು ತಮ್ಮ ಬಾಲ್ಯದ ಸ್ನೇಹಿತ, ಗೋಡಂಬಿ ಉದ್ಯಮಿ ಆದಿತ್ಯ ರಾಜ್ ಶರ್ಮಾ ಅವರನ್ನು 2 ಡಿಸೆಂಬರ್ 2020 ರಂದು ಝಾನ್ಸಿ ಬಳಿಯ ಓರ್ಚಾದಲ್ಲಿರುವ ಹೋಟೆಲ್‌ನಲ್ಲಿ ವಿವಾಹವಾದರು. ಡಿಸೆಂಬರ್ 2, 2021 ರಂದು ಪಂಖುರಿಯ ಮೊದಲ ವಿವಾಹ ವಾರ್ಷಿಕೋತ್ಸವವಾಗಿತ್ತು.
ಶ್ರೀವಾಸ್ತವ 2012ರಲ್ಲಿ 20 ಸಾವಿರ ರೂಪಾಯಿ ವೆಚ್ಚದಲ್ಲಿ ಗ್ರಾಬ್‌ಹೌಸ್ ಕಂಪನಿ ಆರಂಭಿಸಿದ್ದರು . ಕಂಪನಿಯು ಎಷ್ಟು ಜನಪ್ರಿಯತೆಯನ್ನು ಗಳಿಸಿತು ಎಂದರೆ ಅದರ ವಾರ್ಷಿಕ ವಹಿವಾಟು ಸುಮಾರು 720 ಕೋಟಿ ರೂ ದಾಟಿತ್ತು. ಅವರನ್ನು ರತನ್ ಟಾಟಾ ಅವರು ಭೋಜನಕ್ಕೆ ಆಹ್ವಾನಿಸಿದ್ದರು. 2016 ರಲ್ಲಿ ಆನ್‌ಲೈನ್ ಜಾಹೀರಾತಿನ ಕಂಪನಿ Quikr ಗೆ ಬಾಡಿಗೆ ಸ್ಟಾರ್ಟ್ಅಪ್ Grabhouse ಅನ್ನು ನಗದು ಮತ್ತು ಇಕ್ವಿಟಿ ಒಪ್ಪಂದದಲ್ಲಿ ಮಾರಾಟ ಮಾಡಿದ್ದರು.








