ಗೆಲುವಿನ ಸನಿಹದಲ್ಲಿ ಭಾರತ, ಇನ್ನೂ ಮೂರು ವಿಕೆಟ್ ಮಾತ್ರ ಬಾಕಿ….
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನ 5ನೇ ದಿನದಾಟ ಮುಂದುವರಿದಿದೆ. ಆಫ್ರಿಕಾ ತಂಡದ ಮುಂದೆ 305 ರನ್ ಗಳ ಗುರಿ ಇದ್ದು, ಇದಕ್ಕೆ ಉತ್ತರವಾಗಿ ತಂಡದ ಸ್ಕೋರ್ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ತೆಂಬಾ ಬೌಮ ಮತ್ತು ಮಾರ್ಕ್ ಜಾನ್ಸಸೆನ್ ಕ್ರೀಸ್‌ನಲ್ಲಿದ್ದಾರೆ. ಇಲ್ಲಿಯವರೆಗೆ ಸೆಂಚುರಿಯನ್‌ನಲ್ಲಿ ಯಾವುದೇ ತಂಡವು 250+ ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದಿಲ್ಲ.
ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ನಡೆಸಿ 3 ವಿಕೆಟ್‌ಗಳನ್ನ ಪಡೆದರೆ ಶಮಿ 2 ಮತ್ತು ಸಿರಾಜ್ 2 ವಿಕೆಟ್ ತೆಗೆದುಕೊಂಡಿದ್ದಾರೆ.
156 ಎಸೆತಗಳಲ್ಲಿ 77 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುತ್ತಿದ್ದ ಡೀನ್ ಎಲ್ಗರ್ ಔಟಾದರು ಜಸ್ಪ್ರೀತ್ ಬುಮ್ರಾ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿ ಭಾರತಕ್ಕೆ ಬ್ರೇಕ್ ತಂದುಕೊಟ್ಟರು. ಎಲ್ಗರ್ ಅವರ 77 ರನ್ ವೃತ್ತಿಜೀವನದ 18 ನೇ ಟೆಸ್ಟ್ ಮತ್ತು ಭಾರತದ ವಿರುದ್ಧ ಮೂರನೇ ಅರ್ಧಶತಕವಾಗಿದೆ.
ಹವಾಮಾನ ವರದಿ ಪ್ರಕಾರ, ಸೆಂಚುರಿಯನ್ ಪಂದ್ಯದ ಕೊನೆಯ ದಿನದಂದು 50-50% ಮಳೆಯಾಗುವ ಸಾಧ್ಯತೆಯಿದೆ. ತಾಪಮಾನವು 27 ಡಿಗ್ರಿಗಳವರೆಗೆ ತೋರಿಸುತ್ತಿದೆ.
ಸೆಂಚುರಿಯನ್ ನಲ್ಲಿ ಅತ್ಯಂತ ಯಶಸ್ವಿ ರನ್ ಚೇಸ್ ಇಂಗ್ಲೆಂಡ್ ಹೆಸರಿನಲ್ಲಿ ನೋಂದಣಿಯಾಗಿದೆ. 2000 ರಲ್ಲಿ ಆಫ್ರಿಕಾ 249 ರನ್‌ಗಳ ಗುರಿಯನ್ನು ನೀಡಿತ್ತು, ಅದನ್ನು ENG ಕೈಯಲ್ಲಿ 2 ವಿಕೆಟ್‌ಗಳಿರುವಂತೆ ಸಾಧಿಸಿತು. ಇದಾದ ಬಳಿಕ ಆಫ್ರಿಕಾ ತಂಡ 1998 ರಲ್ಲಿ ಶ್ರೀಲಂಕಾ ವಿರುದ್ಧ 226 ರನ್ ಚೇಸ್ ಮಾಡಿತ್ತು.