ವಿಶ್ವ ಮಿಸೆಸ್ ವರ್ಲ್ಡ್ – ರಾಷ್ಟ್ರೀಯ ಧಿರಿಸಿನಲ್ಲಿ ಪ್ರಶಸ್ತಿ ಗೆದ್ದ ನವದೀಪ್ ಕೌರ್
ವಿವಾಹಿತ ಮಹಿಳೆರಿಗೆಂದು ಆಯೊಜಿಸಲಾಗುವ ವಿಶ್ವ ಮಿಸೆಸ್ ಇಂಡಿಯಾ ಸ್ಪರ್ದೆಯಲ್ಲಿ ಭಾರತೀ ಸ್ಪರ್ಧಿ ನವದೀಪ್ ಕೌರ್ ಅವರು ಅತ್ಯುತ್ತಮ ರಾಷ್ಟ್ರೀಯ ಧಿರಿಸು ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.
ಒಡಿಶಾ ಮೂಲದ ನವದೀಪ್ ಕೌರ್ ಈಗಾಗಲೇ ಒಂದು ಭಾರಿ ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕಾದ ಲಾಸ್ ವೆಗಾಸ್ ನಲ್ಲಿ ನಡೆದ ರಾಷ್ಟ್ಟ್ರಿಯ ವೇಷ ಭೂಷಣ ಸ್ಪರ್ಧೆಯಲ್ಲಿ ಕುಂಡಲಿನಿ ಚಕ್ರದಂತೆ ಇರುವ ಧಿರಿಸು ಧರಿಸಿ ಭಾಗವಹಿಸಿದ್ದರು. ಈ ಕುರಿತು ಮಿಸೆಸ್ ಇಂಡಿಯಾದ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.
ನಮ್ಮ ರಾಣಿ 2021 ರ ಮಿಸ್ ವರ್ಲ್ದ್ ಆಗಿದ್ದ ನವದೀಪ್ ಕೌರ್ 2022 ರ ರಾಷ್ಟ್ರೀಯ ವೇಷಭೂಷಣ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಎಂದು ಘೋಷಿಸಲು ಸಂತೊಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಕಲಾವಿದ ಎಗ್ಗಿ ಜಾಸ್ಮೀನ್ ಅವರ ಪರಿಕಲ್ಪನೆಯಂತೆ ಕುಂಡಲಿನಿ ಚಕ್ರವನ್ನ ಬಿಂಬಿಸುವಂತಹ ಉಡುಪಿನಲ್ಲಿ ಪೋಸ್ ನೀಡಿದ್ದಾರೆ.
ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ನವದಿಪ್ ಕೌರ್ ಎಂ ಬಿ ಎ ಮಾಡಿದ್ದು ಬ್ಯಾಂಕ್ ವ್ಯವಸ್ಥಾಪಕರಾಗಿ ಅಸಿಸ್ಟೆಂಟ್ ಪ್ರೊಪೆಸರ್ ಆಗಿಯೂ ಕೆಲಸ ನಿರ್ವಹಿಸಿದ್ದಾರೆ. ಇವರಿಗೆ 6 ವರ್ಷದ ಮಗಳಿದ್ದಾಳೆ.







