RCB | 2011ರ ವಿಶ್ವಕಪ್ ಗೆಲುವಿನ ಬಗ್ಗೆ ವಿರಾಟ್ ಮಾತು
ಏಪ್ರಿಲ್ 2, 2011 ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯದಿರುವ ದಿನ. ಅಂದು ಮುಂಬೈನ ವಾಂಖಡೆ ಮೈದಾನದಲ್ಲಿ 28 ವರ್ಷಗಳ ಬಳಿಕ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು.
ಎಂ.ಎಸ್.ಧೋನಿ ನೇತೃತ್ವದಲ್ಲಿ ಲಂಕಾ ದಹನ ಮಾಡಿದ ಟೀಂ ಇಂಡಿಯಾ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು.
ಟೀಂ ಇಂಡಿಯಾದ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ, ಸಿಕ್ಸರ್ ಬಾರಿಸುತ್ತಿದ್ದಂತೆ ವಾಂಖೆಡೆಯಲ್ಲಿ ಭಾರತೀಯರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಆ ಸಂಭ್ರಮಕ್ಕೆ ಇಂದಿಗೆ 11 ವರ್ಷ. ಈ ಹಿನ್ನಲೆಯಲ್ಲಿ ಅಂದು ಟೀಂ ಇಂಡಿಯಾದ ಸದಸ್ಯರಾಗಿದ್ದ ವಿರಾಟ್, ಇದೀಗ ವಿಶ್ವಕಪ್ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಜೊತೆಗೆ ಸಿರಾಜ್ ಮತ್ತು RCB ತಂಡದ ಹೆಡ್ ಕೋಚ್ ಸಂಜಯ್ ಬಂಗಾರ್ ವಿಶ್ವಕಪ್ ಗೆಲುವನ್ನ ಮೆಲುಕು ಹಾಕಿದ್ದಾರೆ.
ಆ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದೆ.
April 2nd 2011, that World Cup winning six from Dhoni is etched in every Indian cricket fan’s memory. On its 11th year anniversary, watch Virat, Siraj and other members of the RCB camp tell us what the day meant to them, on @kreditbee presents Bold Diaries.#PlayBold #TeamIndia pic.twitter.com/PURyObVwon
— Royal Challengers Bengaluru (@RCBTweets) April 2, 2022
11th anniversary of India’s 2011 WC victory









