ನವದೆಹಲಿ: ಇಂದು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ 124ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ದೇಸಾಯಿ ಅವರ ತತ್ವ ಆಧಾರಿತ ರಾಜಕೀಯವನ್ನು ಸ್ಮರಿಸಿಕೊಂಡಿದ್ದಾರೆ.
“ಮಾಜಿ ಪ್ರಧಾನಿ ಮೊರಾರ್ಜಿ ಭಾಯ್ ದೇಸಾಯಿ ಅವರಿಗೆ ನನ್ನ ಗೌರವ ನಮನಗಳು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ರಾಜಕೀಯ ಜೀವನ ಶಿಸ್ತು ಮತ್ತು ತತ್ವಗಳಿಂದ ಕೂಡಿತ್ತು. ಅದಕ್ಕಾಗಿ ಅವರನ್ನು ಯಾವಾಗಲೂ ನಾವು ನೆನಪಿಸುತ್ತಿಕೊಳ್ಳುತ್ತೇವೆ. ಅತಿ ಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ್ದ ಹೆಗ್ಗಳಿಕೆ ಅವರದ್ದು” ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಮೊರಾರ್ಜಿ ದೇಸಾಯಿ ಅವರು ಫೆಬ್ರವರಿ 29ರಂದು ಜನಿಸಿದ್ದು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಬರುವ ಈ ದಿನದಂದು(ಲೀಪ್ ಇಯರ್ ಡೇ) ಅವರ ಜನ್ಮ ದಿನಾಚರಣೆ ಆಚರಿಸಲಾಗುತ್ತದೆ. 1896ರಲ್ಲಿ ಗುಜರಾತ್ನ ಬುಲ್ಸರ್ ಜಿಲ್ಲೆಯಲ್ಲಿ ಜನಿಸಿದ ಮೊರಾರ್ಜಿ ದೇಸಾಯಿ ಅವರು ಮಾರ್ಚ್ 1977 ಮತ್ತು ಜುಲೈ 1979ರ ನಡುವೆ ಭಾರತದ ಪ್ರಧಾನ ಮಂತ್ರಿಯಾಗಿದ್ದರು.
https://twitter.com/i/status/1233593379096858624








