ಭದ್ರತಾ ವಾಹನಗಳಿಗೆ ಬೆಂಕಿ : 13 ಮಂದಿ ದುರ್ಮರಣ Nagaland saaksha tv
ನಾಗಾಲ್ಯಾಂಡ್ : ನಾಗಾಲ್ಯಾಂಡ್ನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ. ಪರಿಣಾಮ ಒಬ್ಬ ಯೋಧ ಸೇರಿದಂತೆ ಹಲವು ಗ್ರಾಮಸ್ಥರು ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಮೋನ್ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಓಟಿಂಗ್ ಗ್ರಾಮದ ಜನರ ಗುಂಪೊಂದು ಪಿಕಪ್ ವಾಹನದಲ್ಲಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ.
ಗ್ರಾಮಸ್ಥರು ಮನೆಗೆ ಬಾರದ ಹಿನ್ನೆಲೆಯಲ್ಲಿ ಓಟಿಂಗ್ ಗ್ರಾಮದ ಸ್ವಯಂ ಸೇವಕರ ತಂಡ, ಅವರನ್ನು ಹುಡುಕಿಕೊಂಡು ಹೋಗಿದೆ.
ಈ ವೇಳೆ ಪಿಕಪ್ ವಾಹನದಲ್ಲಿ ಶವಗಳು ಪತ್ತೆಯಾಗಿವೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಸೇನೆಯ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಈ ವೇಳೆ ಓರ್ವ ಯೋಧ ಕೂಡ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಇನ್ನು ಈ ಸಂಬಂಧ ನಾಗಾಲ್ಯಾಂಡ್ ನ ಮುಖ್ಯಮಂತ್ರಿ ಉನ್ನತ ಮಟ್ಟದ ವಿಶೇಷ ತನಿಖೆಗೆ ಆದೇಶಿಸಿದ್ದಾರೆ. ಈ ಗುಂಡಿನ ದಾಳಿ ತೀವ್ರ ಖಂಡನೀಯ.
ಅನ್ಯಾಯವಾಗಿ ಬಲಿಯಾದವರ ಸಾವಿಗೆ ನ್ಯಾಯ ಒದಗಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.









