ADVERTISEMENT
Sunday, March 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಕ್ಷಕನೋ ಹೌದು…. ರಕ್ಕಸನೋ ಹೌದು… ಆಯ್ತು 13 ವರ್ಷ.. ಸಚಿನ್ ದಾಖಲೆ ಅಳಿಸಿ ಹಾಕೋದು ಯಾವಾಗ ವಿರಾಟ್…?

admin by admin
August 18, 2021
in Newsbeat, Sports, ಕ್ರೀಡೆ
virat kohli team india saakshatv

COLOMBO, SEP 3 :- India's team captain Virat Kohli celebrates his half century.during Sri Lanka v/s India - Fifth One Day International Match - Colombo, Sri Lanka - September 3, 2017 REUTERS-28R

Share on FacebookShare on TwitterShare on WhatsappShare on Telegram

Related posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

March 7, 2026
ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

March 7, 2026

ರಕ್ಷಕನೋ ಹೌದು…. ರಕ್ಕಸನೋ ಹೌದು… ಆಯ್ತು 13 ವರ್ಷ.. ಸಚಿನ್ ದಾಖಲೆ ಅಳಿಸಿ ಹಾಕೋದು ಯಾವಾಗ ವಿರಾಟ್…?

ರಕ್ಷಕನೋ ಹೌದು…. ರಕ್ಕಸನೋ ಹೌದು… ಈತ ವಿಶ್ವ ಕ್ರಿಕೆಟ್ ನ ಹುಲಿಯಾ….!
ನೀನೊಬ್ಬ ಮಾಸ್ಟರ್ ಪೀಸ್…! ಮೈದಾನದಲ್ಲಿ ನೀಡಾಡುವ ಆಟದ ಪರಿಯೇ ಅದ್ಭುತÀ..!
ಎದುರಾಳಿಗಳಿಗೆ ನೀನೊಬ್ಬ ಘನಘೋರ ಅಸುರ… ಟೀಮ್ ಇಂಡಿಯಾದ ಗರ್ಭಗುಡಿಗೆ ನೀನೇ ದೇವ್ರು..!
ವಿಶ್ವ ಕ್ರಿಕೆಟ್ ಬಂದು ಆಯ್ತು 13 ವರ್ಷ.. ಸಚಿನ್ ದಾಖಲೆ ಅಳಿಸಿ ಹಾಕೋದು ಯಾವಾಗ ವಿರಾಟ್ ?

virat kohli team india saakshatvವಿರಾಟ್ ಕೊಹ್ಲಿ..
ಅಬ್ಬಾ…. ನಿನ್ನ ಬ್ಯಾಟಿಂಗ್ ವೈಖರಿಯನ್ನು ಯಾವ ರೀತಿ ಬಣ್ಣಿಸಬೇಕು ಅಂತನೇ ತಿಳಿಯುತ್ತಿಲ್ಲ. ಯಾಕಂದ್ರೆ ನೀನು ಮೈದಾನದಲ್ಲಿ ಆಡುತ್ತಿದ್ದಿಯೋ… ಅಥವಾ ಯುದ್ಧ ಮಾಡುತ್ತಿದ್ದಿಯೋ ಎಂಬುದೇ ಗೊತ್ತಾಗುತ್ತಿಲ್ಲ. ಮೈದಾನದಲ್ಲಿ ನೀನಾಡುವ ಪರಿಯನ್ನು ನೋಡಿದಾಗ ನೀ ರಕ್ಷಕನೋ… ರಕ್ಕಸನೋ ಅನ್ನೋ ಅನುಮಾನ ಕೂಡ ಮೂಡದೇ ಇರುವುದಿಲ್ಲ.
ಹೌದು, ಪುರಾಣ ಕಥೆಗಳಲ್ಲಿ ಏಕಾಂಗಿಯಾಗಿ ಯುದ್ಧ ಮಾಡುವ ಮಹಾ ಶೂರರ ಕಥೆಗಳನ್ನು ಕೇಳಿದ್ರೂ ಕಣ್ಣಾರೆ ನೋಡಿಲ್ಲ. ಆದ್ರೆ 22 ಯಾರ್ಡ್ ನ ಕ್ರಿಕೆಟ್ ಮೈದಾನದಲ್ಲಿ ನಿನ್ನಾಟವನ್ನು ನೋಡುತ್ತಿದ್ದಾಗ ನೀನೊಬ್ಬ ಮಹಾ ಶೂರನಂತೆ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.
ಹೌದು, ಟೀಮ್ ಇಂಡಿಯಾದ ದಳಪತಿಯಾಗಿ ತಂಡವನ್ನು ರಕ್ಷಣೆ ಮಾಡುವುದು ನಿನ್ನ ಜವಾಬ್ದಾರಿ ಎಂಬುದನ್ನು ನೀ ಮರೆಯುವುದಿಲ್ಲ. ತಂಡದ ಗೆಲುವಿಗಾಗಿ ನೀ ನಡೆಸುವ ಹೋರಾಟಕ್ಕೆ ಭೇಷ್ ಅನ್ನದಿರಲು ಮನಸ್ಸು ಒಪ್ಪುವುದಿಲ್ಲ. ಎದುರಾಳಿ ತಂಡಗಳಿಗೆ ನೀನು ಘನಘೋರ ಅಸುರನಂತೆ ಕಾಡುವುದು ಸುಳ್ಳಲ್ಲ. ಉಗ್ರಪ್ರತಾಪಿಯಂತೆ ಬ್ಯಾಟ್ ಬೀಸುವ ನಿನ್ನನ್ನು ಎದುರಾಳಿಗಳು ಮಹಾ ಕ್ರೂರಿ ಅಂತ ಬಣ್ಣಿಸಿದ್ರೂ ಅಚ್ಚರಿ ಏನಿಲ್ಲ. ಆದ್ರೆ ಟೀಮ್ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳು ಚೇಸಿಂಗ್ ಮಾಸ್ಟರ್ ಅಂತ ಉಘೇ.. ಉಘೇ ಅನ್ನುವುದರಲ್ಲಿ ತಪ್ಪೇನೂ ಇಲ್ಲ.
ಯಾಕಂದ್ರೆ ನೀ ಆಡುವ ರೀತಿಯೇ ಹಾಗಿದೆ. ಚೆಂಡು ಬ್ಯಾಟ್ ನ ಸಮರದಲ್ಲಿ ಕೋಪ, ರೋಷಾಗ್ನಿ ಜ್ವಾಲೆ ನಿನ್ನ ಮುಖದಲ್ಲಿ ಪ್ರಜ್ವಲಿಸುತ್ತದೆ. ಮಾತಿಗೆ ಮಾತು.. ಏಟಿಗೆ ಏಟು.. ಅಲ್ಲೇ ಡ್ರಾ.. ಆಲ್ಲೇ ಬಹುಮಾನ ಎಂಬಂತೆ ಕೆಣಕಿದವರಿಗೆ ನೀ ಕೊಟ್ಟ ತಿರುಗೇಟನ್ನು ಜೀವಮಾನದಲ್ಲೇ ಅವರು ಮರೆಯಲಿಕ್ಕಿಲ್ಲ. ನೀ ಗಳಿಸಿದ್ದ ಒಂದೊಂದು ರನ್ ಗಳಿಗೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಬೌಂಡರಿ ಸಿಕ್ಸರ್ ಗಳ ಅಬ್ಬರಕ್ಕೆ ಅಭಿಮಾನಿಗಳ ಕೂಗು ಝೇಂಕಾರದಂತೆ ಮಾರ್ದನಿಸುತ್ತದೆ.

virat kohli team india saakshatvಟೀಮ್ ಸೋಲಲಿ ಅಥವಾ ಗೆಲ್ಲಲಿ.. ಅಲ್ಲಿ ಹೆಚ್ಚು ಸದ್ದು, ಸುದ್ದಿ ಮಾಡೋದು. ನೀನೇ. ಯಾಕಂದ್ರೆ ನಿನ್ನ ಆಟದ ಖದರ್, ನಿನ್ನ ಗರ್ವ, ನಿನ್ನ ಅಹಂಕಾರ.. ನಿನ್ನ ನಾಯಕತ್ವ.. ಗೆಲ್ಲಲೇಬೇಕು ಅನ್ನೋ ನಿನ್ನ ಕಿಚ್ಚು, ನಿನ್ನ ಹೋರಾಟವನ್ನು ನೋಡಿದಾಗ ನವರಸಗಳ ನರ್ತನದಂತೆ ಭಾಸವಾಗುತ್ತದೆ.
ಅದೇನೇ ಇರಲಿ, ನೀನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಇಂದಿಗೆ ಭರ್ತಿ 13 ವರ್ಷ. ಆಗಸ್ಟ್ 18, 2008ರಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಟ್ಟರು. ಲಂಕಾದ ದಂಬುಲಾ ಅಂಗಣದಿಂದ ಶುರುವಾದ ವಿರಾಟ್ ಕೊಹ್ಲಿಯವರ ಜರ್ನಿ ಯಶಸ್ವಿಯಾಗಿ ಸಾಗುತ್ತಿದೆ. ಟೀಮ್ ಇಂಡಿಯಾಗೆ ಒಬ್ಬ ಆಟಗಾರನಾಗಿ ಎಂಟ್ರಿಕೊಟ್ಟು, ತಂಡಕ್ಕೆ ಆಧಾರಸ್ತಂಭವಾಗಿ, ನಂತರ ನಾಯಕನಾಗಿ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಹಲವು ದಾಖಲೆಗಳ ಒಡೆಯ ಕೂಡ ಹೌದು.
ವಿರಾಟ್ ಕೊಹ್ಲಿ ಇಲ್ಲಿಯವರೆಗೆ 94 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಏಳು ದ್ವಿತಕ ಸೇರಿ 27 ಶತಕಗಳು ಸೇರಿದಂತೆ ಒಟ್ಟು 7809 ರನ್ ಗಳಿಸಿದ್ದಾರೆ. ಹಾಗೇ 254 ಏಕದಿನ ಪಂದ್ಯಗಳಲ್ಲಿ 43 ಶತಕಗಳ ಸೇರಿದಂತೆ ಒಟ್ಟು 12169 ರನ್ ಗಳಿಸಿದ್ದಾರೆ. 89 ಟಿ-ಟ್ವೆಂಟಿ ಪಂದ್ಯಗಳಲ್ಲಿ 3159 ರನ್ ಗಳಿಸಿದ್ದು, ಐದು ಶತಕಗಳನ್ನು ದಾಖಲಿಸಿದ್ದಾರೆ.
ಆದ್ರೆ ವಿರಾಟ್ ಕೊಹ್ಲಿ ಅವರ ಬ್ಯಾಟ್ ನಿಂದ ಕಳೆದ ಎರಡು ಮೂರು ವರ್ಷಗಳಿಂದ ನಿರೀಕ್ಷಿತವಾಗಿ ರನ್ ಗಳು ಹರಿದು ಬಂದಿಲ್ಲ. ಅಷ್ಟೇ ಅಲ್ಲ, ಶತಕಗಳ ಬರವನ್ನು ಎದುರಿಸುತ್ತಿದ್ದಾರೆ. ಅದೇನೇ ಇರಲಿ, ವಿರಾಟ್ ಕೊಹ್ಲಿ ಫಾರ್ಮ್ ಗೆ ಬಂದ್ರೆ ಎದುರಾಳಿ ತಂಡಗಳಿಗೆ ಭಯ, ಆತಂಕ ಎಲ್ಲವೂ ಶುರುವಾಗುತ್ತದೆ. ಹಾಗೇ ಸಚಿನ್ ತೆಂಡುಲ್ಕರ್ ಅವರ ಏಕದಿನ ಕ್ರಿಕೆಟ್ ನ ದಾಖಲೆಗಳು ಅಳಿಸಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ರೆ ಯಾವಾಗ ಅಂತ ಹೇಳಲು ಸಾಧ್ಯವಿಲ್ಲ…?

Tags: #saakshatvbcciCricketICCIPLRCBSportsteam indiavirat kohli
ShareTweetSendShare
Join us on:

Related Posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

by admin
March 7, 2026
0

ಸಂಜು ಸ್ಯಾಮ್ಸನ್.. ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು...! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ...

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

by Shwetha
March 7, 2026
0

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯ ಮೂಲಕ ರಾಜ್ಯದ...

ವಸತಿ ಯೋಜನೆ ಸಬ್ಸಿಡಿ ಹೆಚ್ಚಳ: SC/ST ಫಲಾನುಭವಿಗಳಿಗೆ ₹3 ಲಕ್ಷ ಘೋಷಣೆ

ವಸತಿ ಯೋಜನೆ ಸಬ್ಸಿಡಿ ಹೆಚ್ಚಳ: SC/ST ಫಲಾನುಭವಿಗಳಿಗೆ ₹3 ಲಕ್ಷ ಘೋಷಣೆ

by Shwetha
March 7, 2026
0

ಕರ್ನಾಟಕ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ಧರಾಮಯ್ಯ ಅವರು ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಈವರೆಗೆ ₹1.20 ಲಕ್ಷ ಇದ್ದ ವಸತಿ ಸಬ್ಸಿಡಿಯನ್ನು ₹2...

ಕರ್ನಾಟಕ ಬಜೆಟ್ 2026: ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ, ಒಪಿಎಸ್ ಇಲ್ಲ, ಕ್ಯಾಂಟೀನ್ ಇಲ್ಲ ಹುಸಿಯಾದ  ನಿರೀಕ್ಷೆಗಳು

ಕರ್ನಾಟಕ ಬಜೆಟ್ 2026: ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ, ಒಪಿಎಸ್ ಇಲ್ಲ, ಕ್ಯಾಂಟೀನ್ ಇಲ್ಲ ಹುಸಿಯಾದ ನಿರೀಕ್ಷೆಗಳು

by Shwetha
March 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ರಾಜಕೀಯ ಜೀವನದ ದಾಖಲೆಯ 17ನೇ ಹಾಗೂ 4.49 ಲಕ್ಷ ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸಮಗ್ರ...

ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಂಪರ್ ಕೊಡುಗೆ ; 56,432 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ

ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಂಪರ್ ಕೊಡುಗೆ ; 56,432 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ

by Shwetha
March 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ತಮ್ಮ ಐತಿಹಾಸಿಕ 17ನೇ ರಾಜ್ಯ ಬಜೆಟ್ ನಲ್ಲಿ ನಾಡಿನ ಲಕ್ಷಾಂತರ ನಿರುದ್ಯೋಗಿ ಯುವಜನತೆಗೆ ಆಶಾದಾಯಕ ಮತ್ತು ಅತ್ಯಂತ ಮಹತ್ವದ ಸಿಹಿಸುದ್ದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram