Bengaluru film festival ಮಾರ್ಚ್ 3ರಿಂದ 13 ವರೆಗೆ ನಿಗದಿ…
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹದಿಮೂರನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಕುರಿತು ಸಭೆ ನಡೆಯಿತು . ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಚಲನಚಿತ್ರೋತ್ಸವದ ಲೋಗೋ ಬಿಡುಗಡೆ ಮಾಡಿದರು.
ಈ ವರ್ಷದ ಸಿನಿಮೋತ್ಸವ ಮಾರ್ಚ್ 3 ರಿಂದ 13 ರ ವರೆಗೆ ನಡೆಯಲಿದೆ. 2006 ರಿಂದ ಆರಂಭವಾದ ಬೆಂಗಳೂರು ಸಿನಿಮೋತ್ಸವ ಈಗ ಅಂತರಾಷ್ಟ್ರೀಯ ಮಟ್ಟ್ಟದ ಮಾನ್ಯತೆಯನ್ನ ಪಡೆದುಕೊಂಡಿದೆ. Bengaluru International Film Festival to kick off on March 3
ಚಲನಚಿತ್ರೋತ್ಸವ ಸಂಘಟನಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಸಿ ಎಂ ಬೊಮ್ಮಾಯಿ ಮಾತನಾಡಿ ಬೆಂಗಳೂರು ಸಿನಿಮೋತ್ಸವ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತು ಪಡೆದುಕೊಂಡಿದೆ. ಇದು ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ಹೆಚ್ಚು ಸಹಕಾರಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
https://twitter.com/CMofKarnataka/status/1486694473169981440?cxt=HHwWgMCqreOv5qEpAAAA
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಮಾನ್ಯತೆ ನೀಡಿದೆ. ಈ ಮೂಲಕ ವಿಶ್ವದ 45 ಜಾಗತಿಕ ಮಟ್ಟದ ಚಲನಚಿತ್ರೋತ್ಸವಗಳ ಪೈಕಿ ಬೆಂಗಳೂರು ಸೇರಿರುವುದು ಹೆಮ್ಮೆಯ ಸಂಗತಿ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಪ್ರತಿ ಬಾರಿ ಬೆಂಗಳೂರು ಸಿನಿಮೋತ್ಸವ ಫೆಬ್ರವರಿಯಲ್ಲಿ ನಡೆಯುವುದು ಪದ್ದತಿ ಆದರೆ ಈ ಭಾರಿ ಕೋವಿಡ್ ಸಾಂಕ್ರಮಿಕ ಪರಿಸ್ಥಿತಿ ಇರುವ ಕಾರಣದಿಂದಾಗಿ ಮಾರ್ಚ್ ತಿಂಗಳಿನಲ್ಲಿ ನಡೆಸಲಾಗುತ್ತಿದೆ.
ತೋಟಗಾರಿಕಾ ಸಚಿವ ಮುನಿರತ್ನ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್, ಸೇರಿದಂತೆ ಹಲವರು ಭಾಗಿಯಾಗಿದ್ದರು.








