ಅಂದು 14 ಫೆಬ್ರವರಿ 2019, ಭಾರತೀಯ ಯೋಧರ ಸುಮಾರು 78ಕ್ಕೂ ಹೆಚ್ಚು ವಾಹನಗಳು ಜಮ್ಮುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದವು. ಬೆಳಗಿನ ಜಾವ 3.30ಕ್ಕೆ ಜಮ್ಮುವಿನಿಂದ ಹೊರಟ ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರು(ಸಿ.ಆರ್.ಪಿ.ಎಫ್) ಸಂಜೆಯ ಹೊತ್ತಿಗೆ ಶ್ರೀನಗರ ತಲುಪುವ ನಿರೀಕ್ಷೆಯಲ್ಲಿ ಪಯಣ ಬೆಳೆಸಿದ್ದರು.
ಎಲ್ಲಾ ವಾಹನದಲ್ಲೂ ಸೇರಿ ಸುಮಾರು 2500ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದರು. ಆದರೆ ದುರ್ವಿಧಿಯು ದುಷ್ಕಮಿಗಳ ವೇಷದಲ್ಲಿ ಯೋಧರ ಮೇಲೆ ದಾಳಿ ನಡೆಸಲು ದಾರಿಯಲ್ಲಿ ಹೊಂಚುಹಾಕಿ ಕಾಯುತ್ತಿತ್ತು. ಇದಾವುದರ ಪರಿವೇ ಇಲ್ಲದ ಯೋಧರ ಪಯಣ ಪುಲ್ವಾಮ ಜಿಲ್ಲೆಯ ಲೆಥ್ಪೊರದ ದಾರಿಯಲ್ಲಿ ಸಾಗುತ್ತಿತ್ತು.
ಅಷ್ಟರಲ್ಲಿ ಅಲ್ಲೊಂದು ಭಯಾನಕ ದುರಂತ ನಡೆದೇ ಹೊಯಿತು. ಕಣ್ಣು ಮುಚ್ಚಿ ತೆರೆಯುವುದರಲ್ಲಿ ಆತ್ಮಹತ್ಯಾ ಬಾಂಬರ್ ವಾಹನದಿಂದ ಸೈನಿಕರಿದ್ದ ವಾಹನಗಳ ಮೇಲೆ ದಾಳಿ ನಡೆಸಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 44ಮಂದಿ ಯೋಧರು ಹುತಾತ್ಮರಾದರು. ಭಾರತಾಂಬೆ ತನ್ನ ಹೆಮ್ಮೆಯ ಮಕ್ಕಳನ್ನು ಕಳೆದುಕೊಂಡು ಕಣ್ಣೀರು ಸುರಿಸಿದರೆ, ಭೂತಾಯಿ ಆ ವೀರ ಯೋಧರನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡಳು.
ಕಳೆದ ವರ್ಷ ಇದೇ ಫೆಬ್ರವರಿ 14ರಂದು ಜಮ್ಮುವಿನ ಫುಲ್ವಾಮಾದಲ್ಲಿ ಸಿ.ಆರ್.ಪಿ.ಎಫ್ ತುಕಡಿಯನ್ನು ಗುರಿಯಾಗಿಸಿ ಪಾಕಿಸ್ತಾನ ಮೂಲದ ಜೈಷ್–ಎ–ಮೊಹಮದ್ ಉಗ್ರ ಸಂಘಟನೆ ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 44 ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾದರೆ, 70 ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.
ಬರಸಿಡಿಲಿನಂತೆ ಬಂದೆರಗಿದ ಆ ಸುದ್ದಿಯಿಂದ ಇಡೀ ಭಾರತವೇ ಬೆಚ್ಚಿಬಿದ್ದಿತು. ದೇಶಕ್ಕೆ ದೇಶವೇ ಹುತಾತ್ಮರಾದ ಯೋಧರನ್ನು ನೆನೆದು ಕಣ್ಣೀರು ಹಾಕಿತು. ಪಾಕಿಸ್ತಾನದ ಮೇಲೆ ಭಾರತೀಯರ ಎದೆಯಲ್ಲಿ ರೋಷಾಗ್ನಿ ಧಗಧಗನೆ ಉರಿದಿತ್ತು. ನಂತರ ಇದಕ್ಕೆ ಪ್ರತಿಯಾಗಿ ಭಾರತ ಬಾಲಾಕೋಟ್ ಏರ್ ಸ್ಟ್ರೈಕ್ ಹಾಗೂ ಪಿಓಕೆಯಲ್ಲಿ ಸರ್ಜಿಕಲ್ ಸ್ರ್ಟೈಕ್ ನಡೆಸಿ ಪುಲ್ವಾಮಾ ದಾಳಿಗೆ ಪ್ರತೀಕಾರವನ್ನು ತೀರಿಸಿಕೊಂಡಿತು. ಇಂದಿಗೆ ಆ ಘಟನೆ ನಡೆದು ವರ್ಷ ಒಂದು ಸಂದಿದೆ. ಆದರೆ ಇಂದಿಗೂ ಪುಲ್ವಾಮಾ ದಾಳಿಯು ಭಾರತೀಯರ ಸ್ಮತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಹುತಾತ್ಮರಾದ ಯೋಧರ ಬಲಿದಾನವನ್ನು ದೇಶ ಇಂದಿಗೂ ನೆನೆಯುತ್ತಿದೆ.
ಬೀಚ್ಗೆ ಹೋದಾಗ ಎಚ್ಚರ! ಈ Tips Follow ಮಾಡಿ
ಸಮುದ್ರ ತೀರದ ಆನಂದವನ್ನು ಅನುಭವಿಸಲು ಹೋಗುವಾಗ ಸುರಕ್ಷತೆಯನ್ನು ಮರೆಯಬೇಡಿ. ಕಳೆದ ಕೆಲವು ತಿಂಗಳಲ್ಲಿ ಬೀಚ್ಗಳಲ್ಲಿ ಸಂಭವಿಸಿದ ಅನಾಹುತಗಳನ್ನು ಗಮನಿಸಿದರೆ, ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಎಷ್ಟು ಮುಖ್ಯ ಎಂಬುದು...