ದೇಶದಲ್ಲಿ 1,431 ಓಮಿಕ್ರಾನ್ ಕೇಸ್ ಗಳು ಪತ್ತೆ Saaksha TV
ಮಹಾರಾಷ್ಟ್ರ ಒಂದರಲ್ಲೇ 454 ಪ್ರಕರಣಗಳು ಪತ್ತೆಯಾಗಿವೆ.
ಕರ್ನಾಟಕದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಳ
ಶುಕ್ರವಾರ ಪತ್ತೆಯಾಗಿರುವ ಹೊಸ 23 ಕೇಸ್ ಗಳು
ಭಾರತದಲ್ಲಿ ಕೋವಿಡ್-19 ಓಮಿಕ್ರಾನ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚುತ್ತಿವೆ. ಶನಿವಾರ ಒಂದೇ ದಿನ ದೇಶದಲ್ಲಿ 1,431 ಕೇಸ್ ಗಳು ಪತ್ತೆಯಾಗಿವೆ, ಮಹಾರಾಷ್ಟ್ರ ಒಂದರಲ್ಲೇ 454 ಪ್ರಕರಣಗಳು ಪತ್ತೆಯಾಗಿವೆ. ನಂತರ ದೆಹಲಿಯಲ್ಲಿ 351, ತಮಿಳುನಾಡು 118, ಗುಜರಾತ್ 115 ಮತ್ತು ಕೇರಳ 109 ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಹೊಸ ವರ್ಷ ಆಚರಣೆ ಬೆನ್ನಲ್ಲೆ ಓಮಿಕ್ರಾನ್ ಸೋಂಕಿನ ಆತಂಕವೂ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ನಿನ್ನೇ ಒಂದೇ ದಿನ 23 ಹೊಸ ಓಮಿಕ್ರಾನ್ ಸೋಂಕು ಕೇಸ್ ಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಓಮಿಕ್ರಾನ್ ಕೇಸ್‌ಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್ ಮಾಡುವ ಮೂಲಕ ಈ ವಿಚಾರ ದೃಢಪಡಿಸಿದ್ದಾರೆ.
ಶುಕ್ರವಾರ ಪತ್ತೆಯಾಗಿರುವ ಹೊಸ 23 ಕೇಸ್ ಗಳ ಪೈಕಿ 19 ಮಂದಿ ವಿದೇಶದಿಂದ ಬಂದವರಾಗಿದ್ದಾರೆ, ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದಿಂದ ಬಂದ ಪ್ರಯಾಣಿಕರಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಇನ್ನುಳಿದ 4 ಪ್ರಕರಣಗಳು ರಾಜ್ಯದಲ್ಲೇ ಪತ್ತೆಯಾಗಿವೆ.