ಮುಕೇಶ್ ಅಂಬಾನಿಗೆ 15 ಕೋಟಿ ದಂಡ
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಸೆಬಿ 15 ಕೋಟಿ ದಂಡ ವಿಧಿಸಿದೆ. ಮುಖೇಶ್ ಅಂಬಾನಿ ಜೊತೆಗೆ ಅವರು ಸಿಎಂಡಿ ಆಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇತರ ಎರಡು ಕಂಪನಿಗಳಿಗೆ ಸೆಬಿ ದಂಡ ವಿಧಿಸಿದೆ.
ನವೆಂಬರ್ 2007ರಲ್ಲಿ, ರಿಲಯನ್ಸ್ ಪೆಟ್ರೋಲಿಯಂ ಲಿಮಿಟೆಡ್ (ಆರ್ ಪಿಎಲ್) ಷೇರುಗಳ ವಹಿವಾಟಿನಲ್ಲಿ ಅಕ್ರಮಗಳು ನಡೆದ ವಿಷಯವಾಗಿ ಸೆಬಿ ದಂಡ ವನ್ನು ವಿಧಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಗೆ 25 ಕೋಟಿ, ನವಿ ಮುಂಬೈ ಸೇಜ್ ಪ್ರೈವೇಟ್ ಲಿಮಿಟೆಡ್ ಗೆ 20 ಕೋಟಿ, ಮುಂಬೈ ಸೆಜ್ ಲಿಮಿಟೆಡ್ 10 ಕೋಟಿ ರೂಪಾಯಿ ಪಾವತಿಸುವಂತೆ ಸೆಬಿ ಶುಕ್ರವಾರ ಆದೇಶಿಸಿದೆ.
ಮಾರ್ಚ್ 2007ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಆರ್ ಪಿಎಲ್ ನ 4.1% ಪಾಲನ್ನು ಮಾರಾಟ ಮಾಡಲು ನಿರ್ಧರಿಸಿತು.
ಅದೇ ವರ್ಷದ ನವೆಂಬರ್ ನಲ್ಲಿ ಆರ್ ಪಿಎಲ್ ಷೇರುಗಳ ವಹಿವಾಟಿನಲ್ಲಿ ನಗದು ಮತ್ತು ಫ್ಯೂಚರ್ ಸೆಗ್ಮೆಂಟ್ ನಲ್ಲಿ ಅವ್ಯವಹಾರವೆಸಗಿದೆ ಎಂದು ಆರೋಪ ಬಂದಿತ್ತು.
ಆರ್ ಪಿಎಲ್ ನಲ್ಲಿ ತನ್ನ ಪಾಲು ಷೇರುಗಳನ್ನು ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದ ವಹಿವಾಟಿಬಕ್ಕು ರಿಲಿಯನ್ಸ್ ಇಂಡಸ್ಟ್ರಿಸ್ ಅಕ್ರಮವೆಸಗಿದೆ ಎಂದು ಸೆಬಿಯ ಜಾಹೀರಾತು ಅಧಿಕಾರಿ ಬಿ.ಜೆ. ದಿಲೀಪ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









