15 ದಿನ ಕರುನಾಡು ಲಾಕ್ : ಎಲ್ಲವೂ ಬಂದ್ ಬಂದ್..!
ಬೆಂಗಳೂರು : ಕೊರೊನಾ ಕಂಟ್ರೋಲ್ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ವೀಕೆಂಡ್ ಕಫ್ರ್ಯೂ ರೀತಿ ಮುಂದಿನ 15 ದಿನಗಳ ಕಾಲ ಟೈಟ್ ರೂಲ್ಸ್ ಜಾರಿಯಲ್ಲಿರುತ್ತದೆ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ
ನಿನ್ನೆ ಕೊರೊನಾ ಸ್ಪೋಟ ಹಿನ್ನೆಲೆ ಸಿಎಂ ಬಿಎಸ್ ವೈ ತುರ್ತು ಸಚಿವ ಸಂಪುಟ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ನಾಳೆ ರಾತ್ರಿಯಿಂದಲೇ 14 ದಿನ ಟೈಟ್ ರೂಲ್ಸ್ ಜಾರಿ ಮಾಡಿರುವುದಾಗಿ ತಿಳಿಸಿದರು.
ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲವನ್ನೂ ಸರ್ಕಾರ ಬಂದ್ ಮಾಡಿದೆ.
ನಾಳೆ ಸಂಜೆಯಿಂದ 15 ದಿನಗಳ ಕಾಲ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದೆ.
15 ದಿನಗಳ ಬಳಿಕ ಪರಿಸ್ಥಿತಿ ಹತೋಟಿಗೆ ಬರದಿದ್ದರೇ ಮತ್ತೊಂದು ವಾರ ಲಾಕ್ ಡೌನ್ ಮಾಡಲಿದ್ದೇವೆ.
ಎಲೆಕ್ಷನ್ ಗಳನ್ನು ಮುಂದೂಡಿಕೆ ಮಾಡಲಾಗಿದೆ.
ಲಾಕ್ ಡೌನ್ ಪದ ಬಳಸದೇ ಕೊರೊನಾ ಕಫ್ರ್ಯೂ ಎಂದ ಬಿಎಸ್ ವೈ
ಬೆಳಗ್ಗೆ 10 ಗಂಟೆಯ ವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
ಏನಿರುತ್ತೆ..?
ಅಗತ್ಯ ಸೇವೆಗಳಿಗೆ ಅವಕಾಶ
ಕೃಷಿ ಚಟುವಟಿಕೆಗಳಿಗೆ ಅವಕಾಶ
ಗೂಡ್ಸ್ ವಾಹನಗಳಿಗೆ ಅವಕಾಶ
ಕಟ್ಟಡ ಕಾಮಗಾರಿಗೆ ಅವಕಾಶ
ಹೋಟೆಲ್, ಬಾರ್ ಪಾರ್ಸಲ್ ಗೆ ಅವಕಾಶ
ಏನಿರಲ್ಲ..
ಬಸ್ ಸಂಚಾರ ಇರಲ್ಲ
ಗಾಮೇಂಟ್ಸ್ ಇರಲ್ಲ










