ರಾಜ್ಯದಲ್ಲಿ 15 ದಿನ ಲಾಕ್ ಡೌನ್ : ಸುಧಾಕರ್ ಪಟ್ಟು Lockdown
ಬೆಂಗಳೂರು : ರಾಜ್ಯದಲ್ಲಿ ಕನಿಷ್ಠ 15 ದಿನದ ಲಾಕ್ ಡೌನ್ ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಪಟ್ಟು ಹಿಡಿದಿದ್ದಾರೆ.
ಲಾಕ್ ಡೌನ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ ಸುಧಾಕರ್, ಲಾಕ್ ಡೌನ್ ಗೆ ಪಟ್ಟು ಹಿಡಿದಿದ್ದಾರೆ.
ಸಭೆಯಲ್ಲಿ ಸುಧಾಕರ್, ಈಗ ಲಾಕ್ ಡೌನ್ ಮಾಡದಿದ್ದರೇ ಮೇ ತಿಂಗಳಿನಲ್ಲಿ ಸೋಂಕಿತರ ಸಂಖ್ಯೆ ತ್ರಿಬಲ್ ಆಗಲಿದೆ. ರಾಜ್ಯದಲ್ಲಿ ಮೆಡಿಕಲ್ ಸಿಸ್ಟಂ ಕೊಲ್ಯಾಪ್ಸ್ ಆಗುತ್ತಿದೆ.
15 ದಿನ ಅವಕಾಶ ಸಿಕ್ಕರೇ ವ್ಯವಸ್ಥೆಯನ್ನ ಸರಿಮಾಡಬಹುದು. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ಈಗ ಲಾಕ್ ಡೌನ್ ಮಾಡದಿದ್ದರೇ ಆರೋಗ್ಯ ವ್ಯವಸ್ಥೆ ಹಾಲಾಗುತ್ತೆ. ಆಗ ಕಂಟ್ರೋಲ್ ಮಾಡುವುದು ಕಷ್ಟವಾಗುತ್ತದೆ ಎಂದು ಆತಂಕ ಹೊರಹಾಕಿದ್ದಾರೆ.










