ಬೆಳಗಾವಿ: ಸುವರ್ಣ ಸೌಧದಲ್ಲಿ (Suvarna Soudha) ನಡೆದ ವಿಧಾನಸಭಾ (Vidhasbaha) ಕಲಾಪ ಸೋಮವಾರದಂದು ಬರೋಬ್ಬರಿ 15 ಗಂಟೆಗಳ ಕಾಲ ನಡೆದಿದೆ.
ಸೋಮವಾರ ಬೆಳಗ್ಗೆ 10:40ಕ್ಕೆ ಆರಂಭವಾದ ಕಲಾಪ ಮಧ್ಯರಾತ್ರಿ 12.53ರ ವರೆಗೆ ನಡೆಯಿತು. ಮಧ್ಯ ರಾತ್ರಿ 1 ಗಂಟೆಯವರೆಗೆ ಸ್ಪೀಕರ್ ಹಾಗೂ ಡೆಪ್ಯೂಟಿ ಸ್ಪೀಕರ್ ಕಲಾಪ ಜರುಗಿಸಿದರು. ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಬೇಕಿತ್ತು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ 9 ದಿನಕ್ಕೆ ನಡೆಸಲು ನಿರ್ಧಾರ ಮಾಡಲಾಗಿದೆ.
ಇದರ ಮಧ್ಯೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಕೂಡ ನಿಧನರಾಗಿದ್ದರು. ಹೀಗಾಗಿ ಆ ದಿನ ಸಂತಾಪ ಸೂಚನೆಗೆ ಸೀಮಿತವಾಗಿತ್ತು. ಬುಧವಾರ ಸರ್ಕಾರಿ ರಜೆ ಘೋಷಿಸಲಾಯಿತು. ಹೀಗಾಗಿ ಅಧಿವೇಶನದ ಅವಧಇ 8 ದಿನಕ್ಕೆ ಕುಗ್ಗಿತು. ಈ ಹಿನ್ನೆಲೆಯಲ್ಲಿ ಸೋಮವಾರ 15 ಗಂಟೆಗಳ ಕಾಲ ಕಲಾಪ ನಡೆಯಿತು. ಹಲವರು ತುಂಬಾ ಸಮಯವಾಯಿತು ಎಂದು ಹೇಳಿದರೂ ಅಧ್ಯಕ್ಷರು ಮಾತ್ರ ಬೇಗ ಮುಗಿಸುತ್ತೇನೆ ಎಂದು ಎಲ್ಲರನ್ನೂ ಕೂರಿಸುತ್ತ ಕಲಾಪವನ್ನು ಮಧ್ಯರಾತ್ರಿಯವರೆಗೆ ನಡೆಸಿದರು. ಪ್ರತಿಪಕ್ಷ ಮತ್ತು ಆಡಳಿತ ಪಕ್ಷ ಈ ಕಲಾಪಕ್ಕೆ ಬೆಂಬಲ ನೀಡಿದರು.








