ತಿರುಪತಿ ದೇವಾಲಯದ 15 ಮಂದಿ ಅರ್ಚಕರಿಗೆ ಕೊರೊನಾ ದೃಢ
ತಿರುಮಲ : ನೆರೆಯ ಆಂಧ್ರ ಪ್ರದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಪುರಾಣ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದ 15 ಮಂದಿ ಅರ್ಚಕರಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆ ತಿರುಮಲ ತಿರುಪತಿ ದೇವಸ್ಥಾನಂ ತುರ್ತು ಸಭೆ ಕರೆದಿದೆ.
ತಿರುಮಲ ದೇವಸ್ಥಾನದಲ್ಲಿರುವ 50 ಮಂದಿ ಅರ್ಚಕರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಇವರಲ್ಲಿ 15 ಮಂದಿಗೆ ಕೊರೊನಾ ವಕ್ಕರಿಸಿರೋದು ದೃಢಪಟ್ಟಿದ್ದು, 25 ಮಂದಿಯ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.
ಈ 15 ಮಂದಿ ಸೋಂಕಿತರು ಸೇರಿ ಈವರೆಗೆ ತಿರುಮಲ ತಿರುಪತಿ ದೇವಸ್ಥಾನದ ಸುಮಾರು 91 ಮಂದಿ ಕಚೇರಿ ಸಿಬ್ಬಂದಿಗೆ ಕೋವಿಡ್ 19 ಇದ್ದಿರುವುದು ದೃಢಪಟ್ಟಿದೆ.