ಆಗಸ್ಟ್ 19 ಅಂದರೆ ನಾಳೆ ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ್ದ ಬ್ಲಾಕ್ ಬಸ್ಟರ್ ಕನ್ನಡದ ಸೂಪರ್ ಹಿಟ್ ಸಿನಿಮಾ ಜೋಗಿ ತೆರೆಕಂಡು ಹದಿನೈದು ವರ್ಷ ಪೂರೈಸಲಿದೆ. ಹೀಗಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ಜೋಗಿ ಜಾತ್ರೆ ಎಂಬ ಹೆಸರಿನಲ್ಲಿ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಮಾಡುತ್ತಿದ್ದಾರೆ.
ಇನ್ನೂ ಅಭಿಮಾನಿಗಳ ಸಂಭ್ರಮದಲ್ಲಿ ಸಾಥ್ ನೀಡಿರುವ ಜೋಗಿ ಪ್ರೇಮ್ ಅವರು ನಾಳೆ ಸರಿಯಾಗಿ 5 ಗಂಟೆಗೆ ಅಧಿಕೃತ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಖಾತೆಗಳಲ್ಲಿ ಲೈವ್ ಬಂದು ಈ ಕುರಿತು ಮಾತನಾಡಿ ಅಭಿಮಾನಿಗಳ ಖುಷಿಯಲ್ಲಿ ಭಾಗಿಯಾಗಲಿದ್ದಾರೆ.
ಇನ್ನೂ ಇದೇ ಖುಷಿಯಲ್ಲಿ ಸಾವೇ ಬಂದರೂ ಮಣ್ಣೇ ಆದರೂ ನಿಮ್ಮ ಪ್ರೀತಿ ಅಭಿಮಾನಕ್ಕೆಂದೆಂದೂ ಕೊನೆಯಿಲ್ಲ ಎಂಬ ಸಾಲುಗಳನ್ನು ಬರೆಯುವ ಮೂಲಕ ವಿಭಿನ್ನವಾಗಿ ಫ್ಯಾನ್ಸ್ ಪ್ರೀತಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಪ್ರೇಮ್.
ಜೋಗಿ ಸಿನಿಮಾದ ‘ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು’ ಹಾಡಿನಲ್ಲಿ ಬರುವ ಸಾಲನ್ನು ಬದಲಾಯಿಸಿ ‘ಸಾವೇ ಬಂದರೂ ಮಣ್ಣೇ ಆದರೂ ನಿಮ್ಮ ಪ್ರೀತಿ ಅಭಿಮಾನಕ್ಕೆಂದೆಂದೂ ಕೊನೆಯಿಲ್ಲ’ ಎಂದು ಬರೆದುಕೊಂಡಿದ್ದಾರೆ.