ಪ್ರೀತಿಗೆ ಅಡ್ಡ ಬಂದರೆಂದು ತಾಯಿಯ ಕೊಂದೇ ಬಿಟ್ಟಳು 16 ವರ್ಷದ ಬಾಲಕಿ..!
16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಾಯಿಯನ್ನೇ ಸ್ಕೆಚ್ ಹಾಕಿ ಕೊಲೆ ಮಾಡಿರುವ ಬೆಚ್ಚಿ ಬೀಳಿಸುವ ಘಟನೆ ನಡೆದಿರೋದು ಹರಿಯಾಣದಲ್ಲಿ.. ಈಕೆ 18 ವರ್ಷದ ಯುವಕನನ್ನ ಲವ್ ಮಾಡ್ತಾಯಿದ್ಳು.. ಆದ್ರೆ ಈಕೆಯ ತಾಯಿ ಪ್ರೀತಿಗೆ ಅಡ್ಡ ಬಂದರು ಎಂಬ ಕಾರಣಕ್ಕೆ ತನ್ನ ಬಾಯ್ ಫ್ರೆಂಡ್ ಮಾತು ಕೇಳಿಕೊಂಡು ತಾಯಿಯನ್ನೇ ಕೊಲೆ ಮಾಡಿಬಿಟ್ಟಿದ್ದಾಳೆ..
ಈ ಆಘಾತಕಾರಿ ಘಟನೆ ಹರಿಯಾಣಾದ ಫರೀದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಜುಲೈ 10-11ರ ರಾತ್ರಿಯಲ್ಲಿ ಈ ಕೊಲೆ ನಡೆದಿದೆ. ವಿಡಿಯೋ ಕರೆ ಮುಖಾಂತರ ತನ್ನ ಬಾಯ್ ಫ್ರೆಂಡ್ ಕೊಟ್ಟ ನಿದೇರ್ಶನನಾನುಸಾರ ತನ್ನ ತಾಯಿಯನ್ನು ಈ ಹುಡುಗಿ ಕೊಲೆ ಮಾಡಿದ್ದಾಳೆ.
ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಇಬ್ಬರನ್ನೂ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಹುಡುಗನನ್ನು ಫರೀದಾಬಾದ್ ಜೈಲಿಗೆ ಕಳುಹಿಸಲಾಗಿದ್ದು, ಹುಡುಗಿಯನ್ನು ಬಾಲಾಪರಾಧಿಗಳ ಮನೆಗೆ ಕಳುಹಿಸಲಾಗಿದೆ.








