Turkish Strikes On Syria | ವೈಮಾನಿಕ ದಾಳಿಗೆ 17 ಸೈನಿಕರ ಸಾವು
ಸಿರಿಯಾ ಗಡಿಯಲ್ಲಿ ಟರ್ಕಿಯ ವೈಮಾನಿಕ ದಾಳಿ
ಸಿರಿಯಾ ಗಡಿ ಪೋಸ್ಟ್ ಗಳ ಮೇಲೆ ದಾಳಿ
ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಮಾಹಿತಿ
ಕುರ್ದಿಷ್ ಪಡೆಗಳಿಂದ ಟರ್ಕಿ ಪ್ರದೇಶದೊಳಗೆ ದಾಳಿ
ಡಮಾಸ್ಕಸ್ : ಸಿರಿಯಾ ಗಡಿ ಪೋಸ್ಟ್ ಗಳ ಮೇಲೆ ಟರ್ಕಿಯ ಆಡಳಿತ ಪಡೆಗಳು ವೈಮಾನಿಕ ದಾಳಿ ನಡೆಸಿದ್ದು, 17 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.
ಟರ್ಕಿಯ ಆಡಳಿತ ಪಡೆಗಳು ಸಿರಿಯಾ ಗಡಿ ಬಳಿಯ ಹಲವಾರು ಆಡಳಿತದ ಹೊರ ಠಾಣೆಗಳ ಮೇಲೆ ದಾಳಿ ನಡೆಸಿವೆ.

ಇದರಲ್ಲಿ 17 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಮಾಹಿತಿ ನೀಡಿದೆ.
ಕುರ್ದೀಶ್ ಹಿಡಿತದಲ್ಲಿರುವ ಕೊಬಾನ್ ಪಟ್ಟಣದಲ್ಲಿ ಟರ್ಕಿಯ ಪಡೆಗಳು ಹಾಗೂ ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.








