ಉತ್ತರಪ್ರದೇಶ – ಗನ್ ಪಾಯಿಂಟ್ ನಲ್ಲಿ 17 ರ ಅಪ್ರಾಪ್ತೆ ಮೇಲೆ ಇಬ್ಬರಿಂದ ಅತ್ಯಾಚಾರ
ಉತ್ತರ ಪ್ರದೇಶಕ : ಬಂದೂಕು ತೋರಿಸಿ 17 ವರ್ಷದ ಹುಡುಗಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಹೇಯ ಘಟನೆ ಅಪರಾಧಗಳ ಆಗರ ಉತ್ತರಪ್ರದೇಶದ ಶಾಲ್ಮಿ ಜಿಲ್ಲೆಯ ಗ್ರಾಮವೊಂದ್ರಲ್ಲಿ ನನಡೆದಿದೆ. ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನ ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಹುಡುಕಾಟದಲ್ಲಿದ್ದಾರೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಪ್ರಕಾರ, ಇಬ್ಬರು ಆರೋಪಿಗಳು ಬುಧವಾರ ಗನ್ ಪಾಯಿಂಟ್ ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಮಹಿಳೆಯರು , ಬಾಲಕಿಯರು , ವೃದ್ಧೆಯಯರಿಗೂ ಸಹಹ ಸೇಫ್ಟಿಯಿಲ್ಲದಂತಾಗಿದೆ. ಯೋಗಿ ರಾಜ್ಯದಲ್ಲಿ ಮಹಿಳೆಯರು ಒಬ್ಬರೇ ಒಂಟಿಯಾಗಿ ಓಡಾಡುವುದಕ್ಕೂ ಕೂಡ ಹೆದರುವ ಸ್ಥಿತಿಯಿದೆ. ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಲೇ ಇವೆ. ಆದ್ರೆ ಅಪರಾಧಗಳು ಮಾತ್ರ ಕಡಿಮೆಯಾಗ್ತಿಲ್ಲ. ಅಲ್ಲಿನ ಕಾನೂನು ಎಷ್ಟರ ಮಟ್ಟಿಗೆ ದುರ್ಬಲಗೊಂಡಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಒಟ್ಟಾರೆ ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತವಲ್ಲದ ರಾಜ್ಯಗಳ ಪೈಕಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ.








