1 ವರ್ಷದಲ್ಲಿ 175 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ
ಶ್ರೀನಗರ: ಜಮ್ಮು&ಕಾಶ್ಮಿರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಲ್ಲು ತೂರಾಟದ ಘಟನೆಗಳು ಕಡಿಮೆಯಾಗಿವೆ ಎಂದು ಸಿಆರ್ಪಿಎಫ್ ಮಹಾನಿರ್ದೇಶಕ ಕುಲ್ದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜೆ & ಕೆಗೆ ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಲ್ಲು ತೂರಾಟದ ಪ್ರಕರಣಗಳು ಶೂನ್ಯಕ್ಕೆ ಇಳಿದಿವೆ. ಅಲ್ಲದೆ ಕಾಶ್ಮೀರದಲ್ಲಿ ಭಯೋತ್ಪಾದಕರು ತುಂಬಾ ಕಡಿಮೆ ಇದ್ದಾರೆ ಎಂದು ಹೇಳಿದರು.
ಸಿಆರ್ಪಿಎಫ್ ಅಂಕಿಅಂಶಗಳ ಪ್ರಕಾರ, ಯುಟಿಯಲ್ಲಿ ಒಂದು ವರ್ಷದಲ್ಲಿ 175 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, 183 ಮಂದಿ ಭಯೋತ್ಪಾದಕರನ್ನು ಬಂಧಿಸಲಾಗಿದೆ ಮತ್ತು ಇಬ್ಬರು ಶರಣಾಗಿದ್ದಾರೆ. ಮಾರ್ಚ್ 2021 ರಿಂದ ಈ ವರ್ಷದ ಮಾರ್ಚ್ 16 ರ ನಡುವೆ ಮೂವರು ಸಿಆರ್ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದು, 61 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ ಇತ್ತೀಚಿಗೆ ಬಿಹಾರದಲ್ಲಿ ನಡೆಸಿದ ನಕ್ಸಲ್-ವಿರೋಧಿ ಕಾರ್ಯಾಚರಣೆಯ ವೇಳೆಯಲ್ಲಿ ಗಾಯಗೊಂಡ ಸಹಾಯಕ ಕಮಾಂಡೆಂಟ್ ಬಿಭೋರ್ ಕುಮಾರ್ ಸಿಂಗ್ ಅವರನ್ನು ಏಳು ಗಂಟೆಗಳ ಕಾಲ ತಡವಾಗಿ ಸ್ಥಳಾಂತರಿಸಿದ ಕಾರಣ ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು.
ಹಾಗೇ ಕಣಿವೆ ರಾಜ್ಯಕ್ಕೆ ಪ್ರವಾಸಿಗರು ಭೇಟಿ ನೀಡಲು ವಾತಾವರಣವು ಅನುಕೂಲಕರವಾಗಿದೆ, ಆದರೆ ಕಾಶ್ಮೀರಿ ಪಂಡಿತರನ್ನು ಹಿಂದಿರುಗಿಸುವ ಕರೆಯನ್ನು ಸಮುದಾಯ ಅಥವಾ ಏಜೆನ್ಸಿಗಳು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಅಪಾಯ ನಿಧಿಯಿಂದ ಆರ್ಥಿಕ ನೆರವಿನ ಅಡಿಯಲ್ಲಿ, ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸಿಬ್ಬಂದಿಗೆ ಎಕ್ಸ್ ಗ್ರೇಷಿಯಾವನ್ನು 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ ಮತ್ತು ಇತರ ಎಲ್ಲಾ ಪ್ರಕರಣಗಳಿಗೆ ಎಕ್ಸ್ ಗ್ರೇಷಿಯಾವನ್ನು 15 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸಿಆರ್ಪಿಎಫ್ ಡಿಜಿ ತಿಳಿಸಿದರು.








